ಪೌರತ್ವ ತಿದ್ದುಪಡಿ ಕಾಯ್ದೆ: ಅಧಿಸೂಚನೆ ಪ್ರಕಟ

ಕೇಂದ್ರ ಸರ್ಕಾರ ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದೆ. ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. CAA ಅನ್ನು ಡಿಸೆಂಬರ್‌ 2019 ರಲ್ಲಿ ಅಂಗೀಕರಿಸಲಾಯಿತು.

ಅದಕ್ಕೆ ರಾಷ್ಟ್ರಪತಿಯವರ ಒಪ್ಪಿಗೆಯೂ ಸಿಕ್ಕಿತು. ಆದರೆ ಈವರೆಗೆ ನಿಯಮಾವಳಿ ರೂಪಿಸದ ಕಾರಣ ಈ ಕಾನೂನು ಜಾರಿಗೆ ಬಂದಿರಲಿಲ್ಲ. ಇತ್ತೀಚೆಗಷ್ಟೇ ಕೇಂದ್ರವು ಇದನ್ನು ಜಾರಿಗೊಳಿಸುವ ಘೋಷಣೆ ಮಾಡಿತ್ತು.

ಇದೀಗ ಅಧಿಸೂಚನೆ ಪ್ರಕಟ ಮಾಡಿದೆ. ಈ ಕಾಯ್ದೆಯಡಿ ಮಸ್ಲಿಂಮೇತರ ಧರ್ಮಗಳ ನಿರಾಶ್ರಿತರಿಗೆ ಪೌರತ್ವ ನೀಡಲಾಗುತ್ತದೆ.

Comments (0)
Add Comment