ಪ್ರತಾಪ್‌ ಕೈ ತಪ್ಪಿದ ಟಿಕೆಟ್ – ಯದುವೀರ ಒಡೆಯರ್‌ ಅರಮೆನೆಯ ವೈಭೋಗ ತೊರೆದು ರಾಜಕೀಯಕ್ಕೆ ಬಂದರೆ ಸ್ವಾಗತ

ಮೈಸೂರು : ಹಾಲಿ ಬಿಜೆಪಿ ಸಂಸದ ಪ್ರತಾಪ್‌ ಸಿಂಹಗೆ ಈ ಬಾರಿ ಮೈಸೂರು ಕ್ಷೇತ್ರದಿಂದ ಟಿಕೆಟ್‌ ಕೈತಪ್ಪುವ ಭೀತಿಯ ಹಿನ್ನೆಲೆಯಲ್ಲಿ ಇದೀಗ ದೊಡ್ಡ ಆಘಾತ ಎದುರಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಮೈಸೂರು – ಕೊಡಗು ಕ್ಷೇತ್ರದಿಂದ ಯದುವೀರ ಕೃಷ್ಣರಾಜ ಒಡೆಯರ್‌ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗಿದೆ. ತಮಗೆ ಟಿಕೆಟ್‌ ಕೈತಪ್ಪುವುದು ನಿಶ್ಚಿತ ಎನ್ನುವುದು ತಿಳಿಯುತ್ತಿದ್ದಂತೆ ಪ್ರತಾಪ್‌ ಸಿಂಹ ಮಹಾರಾಜರು ಅರಮೆನೆಯ ವೈಭೋಗ ತೊರೆದು ಪ್ರಜೆಗಳ ಪರವಾಗಿ ಕೆಲಸ ಮಾಡಲು ಬಂದರೆ ಅವರನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ. ರಾಜರೊಬ್ಬರು ಪ್ರಜೆಯ ರೀತಿಯಲ್ಲಿ ಬದುಕಲು ಬಂದರೆ ಸ್ವಾಗತಿಸದಿರಲು ಸಾಧ್ಯವೇ ಎಂದು ಪ್ರತಾಪ್ ಸಿಂಹ ತಮ್ಮ ಮನಸಿನ ಕಹಿ ತೋಡಿಕೊಂಡಿದ್ದಾರೆ. ಜೊತೆಗೆ, ಅವರನ್ನು ರಾಜಕೀಯಕ್ಕೆ ಕರೆತಂದ ಪಕ್ಷದ ನಾಯಕರಿಗೂ ಸಹ ಧನ್ಯವಾದಗಳು ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಮುಂದೆ ಅರಮನೆಯವರು ಸಾರ್ವಜನಿಕರ ಸುಪರ್ಧಿಯಲ್ಲಿರುವ ತಮ್ಮ ಆಸ್ತಿಗಳ ಒಡೆತನದ ಬಗ್ಗೆ ಕೋರ್ಟಿನಲ್ಲಿ ವ್ಯಾಜ್ಯ ಹೂಡುವುದಿಲ್ಲ. ಚಾಮುಂಡಿ ಬೆಟ್ಟಕ್ಕೆ ಪೈಪ್‌ ಲೈನ್‌ ಹಾಕಲು ವಿರೋಧಿಸಿದ್ದರು .ಆ ಸಮಸ್ಯೆ ಬಗೆಹರಿಸುತ್ತಾರೆ. ರಾಜೇಂದ್ರ ಸ್ವಾಮಿಗಳ ಪ್ರತಿಮೆ ವಿಚಾರದಲ್ಲಿಯೂ ಕೋರ್ಟ್‌ ಮೆಟ್ಟಿಲೇರಿರುವ ಅವರು, ಈ ಸಮಸ್ಯೆ ಬಗೆಹರಿಸುತ್ತಾರೆಂದು ಪ್ರತಾಪ್‌ ಸಿಂಹ ಅರಮನೆ ಮತ್ತು ಯದುವೀರ್‌ ಒಡೆಯರ ಬಗ್ಗೆ ಕೊಂಕು ಮಾತಾಡಿದ್ದಾರೆ.

Comments (0)
Add Comment