ಪ್ರಧಾನಿ ಮೋದಿ ನಿವಾಸದ ಮೇಲೆ ಕಾಣಿಸಿಕೊಂಡ ಡ್ರೋಣ್; ಪೊಲೀಸರಿಂದ ತನಿಖೆ

ಪ್ರಧಾನಮಂತ್ರಿ ನರೇಂದ್ರಮೋದಿಯವರ ಅಧಿಕೃತ ನಿವಾಸದ ಮೇಲೆ ಡ್ರೋಣ್ ಸುಳಿದಾಡಿರುವ ವರದಿಯಾಗಿದೆ. ಸೋಮವಾರ ಬೆಳಗ್ಗೆ ನವದೆಹಲಿಯಲ್ಲಿರುವ ಪ್ರಧಾನಿ ಅಧಿಕೃತ ನಿವಾಸದ ಮೇಲೆ ಡ್ರೋನ್ ಸುಳಿದಾಡಿರುವ ವರದಿಯಾಗಿದ್ದು, ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪ್ರಧಾನಿಯ ವಿಶೇಷ ರಕ್ಷಣಾ ಗುಂಪಿನ ಅಧಿಕಾರಿಗಳು ಡ್ರೋನ್ ಕಂಡ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

ಜು.14ರಿಂದ ‘ಗೃಹ ಲಕ್ಷ್ಮಿ ಯೋಜನೆ’ಗೆ ಅರ್ಜಿ ಸಲ್ಲಿಕೆ ಆರಂಭ

ನಂತರ ದೆಹಲಿ ಪೊಲೀಸರು ಡ್ರೋನ್ ಅನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಆದರೆ ಇದುವರೆಗೆ ಯಾವುದೇ ಡ್ರೋನ್ ಪತ್ತೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸವು ರೆಡ್ ನೋ ಫ್ಲೈ ಝೋನ್ ಅಡಿಯಲ್ಲಿ ಬರುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

Comments (0)
Add Comment