ಪ್ರಧಾನಿ ಮೋದಿ ಮುಟ್ಟಿದ್ದೆಲ್ಲವೂ ಚಿನ್ನ:’ಅಪಶಕುನ’ ಎಂದವರಿಗೆ ಕಂಗನಾ ತಿರುಗೇಟು

ಮುಂಬೈ: ಅಹಮ್ಮದಾಬಾದ್​ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ವೀಕ್ಷಣೆಗೆ ಪ್ರಧಾನಿ ಮೋದಿಯವರು ಹೋಗಿದ್ದರು. ಅಂತಿಮ ಪಂದ್ಯದಲ್ಲಿ ಭಾರತ ವಿಶ್ವ ಕಪ್​ ಗೆಲ್ಲಲು ವಿಫಲವಾಗುತ್ತಿದ್ದಂತೆಯೇ ಪ್ರಧಾನಿಯವರು ಭಾರತದ ಕ್ರೀಡಾಪಟುಗಳು ಇದ್ದ ಕೋಣೆಗೆ ತೆರಳಿ ಅಲ್ಲಿದ್ದವರಿಗೆ ಸಾಂತ್ವನ ಮಾಡಿದರು. ಆದರೆ ಇದೇ ವೇಳೆ ಮೋದಿ ವಿರೋಧಿಗಳು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರು, ಪ್ರಧಾನಿ ಈ ರೀತಿ ಸಾಂತ್ವನ ಮಾಡಿರುವುದು ನಾಟಕ, ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದ ಕುತಂತ್ರ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಇದೇ ವೇಳೆ ಮೋದಿಯವರು ಅಂದು ಕ್ರಿಕೆಟ್​ ನೋಡಲು ಹೋಗಿದ್ದರಿಂದಲೇ ಭಾರತ ಸೋತಿತು, ಇಲ್ಲದಿದ್ದರೆ ವಿಶ್ವಕಪ್​ ಗೆಲ್ಲುತ್ತಿತ್ತು ಎಂದಿದ್ದಾರೆ.

ಇವರ ಮಾತಿಗೆ ಕಾಂಗ್ರೆಸ್​ ಬೆಂಬಲಿಗರು ತಲೆದೂಗಿದ್ದಾರೆ. ಮೋದಿಯವರನ್ನು ಪನೌತಿ ಅಂದರೆ ಅಪಶಕುನ ಎನ್ನುವ ರೀತಿಯಲ್ಲಿ ಹೀಯಾಳಿಕೆ ಮಾಡಿದ್ದು, ಅವರಿಂದಲೇ ಭಾರತ ಸೋತಿತು ಎಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ನಟಿ ಕಂಗನಾ ರಣಾವತ್​ ಕೆಂಡಾಮಂಡಲ ಆಗಿದ್ದಾರೆ. ಪ್ರಧಾನಿ ಮೋದಿಯವರನ್ನು ಅಪಶಕುನ ಎಂದು ಕರೆದವರಿಗೆ ನಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಮುಟ್ಟಿದ್ದೆಲ್ಲವೂ ಚಿನ್ನ, ಅವರು ಎಂದಿಗೂ ಸೋಲಿಲ್ಲದ ಸರದಾರ ಎಂದಿರುವ ಕಂಗನಾ, ಅಪಶಕುನ ಎಂದು ಹೇಳಿಕೆ ಕೊಟ್ಟದವರ ವಿರುದ್ಧ ಕಿಡಿ ಕಾರಿದ್ದಾರೆ. ಮೋದಿಯವರ ಆಡಳಿತದಲ್ಲಿ ಗುಜರಾತ್ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದೆ. ಅವರು ಪ್ರಧಾನಿಯಾದ ಮೇಲೆ ಭಾರತದ ಆರ್ಥಿಕತೆಯು 4 ಟ್ರಿಲಿಯನ್‌ಗೆ ತಲುಪಿದೆ. ಹಲವು ದಶಕಗಳ ಕಾಲ ಆಡಳಿತ ನಡೆಸಿದ್ದರೂ ಭಾರತದ ಆರ್ಥಿಕತೆ 10ನೇ ಸ್ಥಾನದಲ್ಲಿತ್ತು. ಮೋದಿಯವರು ಪ್ರಧಾನಿಯಾದ ಕೆಲವೇ ವರ್ಷಗಳಿಂದ ಐದನೇ ಸ್ಥಾನಕ್ಕೆ ತಲುಪಿದ್ದು, ಯಾರಿಗೂ ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿರುವ ನಟಿ, ರಾಜಕೀಯದ ದುರುದ್ದೇಶದಿಂದ ಇಂಥ ಕೀಳು ಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

Comments (0)
Add Comment