ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ- ನಾನಾ ಸುಳ್ಳು ಹೇಳಿ ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

ನವದೆಹಲಿ: ನಾನು ಸೇನಾ ವೈದ್ಯ, ನರಶಸ್ತ್ರಚಿಕಿತ್ಸಕ, ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ ಎಂದೆಲ್ಲ ಸುಳ್ಳು ಹೇಳಿಕೊಂಡು ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಒರಿಸ್ಸಾ ಪೊಲೀಸರು ಬಂಧಿಸಿದ್ದಾರೆ.

ವಂಚಕ 37 ವಯಸ್ಸಿನ ಸೈಯದ್ ಇಶಾನ್ ಬುಖಾರಿ ಅಲಿಯಾಸ್ ಎಂದು ಗುರುತಿಸಲಾಗಿದೆ.ವಂಚಕ ಗುರುತನ್ನು ಬದಲಾಯಿಸುತ್ತಿದ್ದ ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ, ನರಶಸ್ತ್ರಚಿಕಿತ್ಸಕ, ಸೇನಾ ವೈದ್ಯ, ಉನ್ನತ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳ ನಿಕಟ ಸಹವರ್ತಿ ಎಂದೆಲ್ಲ ಹೇಳಿಕೊಂಡು ಮಹಿಳೆಯರಿಗೆ ವಂಚಿಸುತ್ತಿದ್ದ ಎನ್ನಲಾಗಿದೆ.

ಒಡಿಶಾ ಪೊಲೀಸ್ ವಿಶೇಷ ಕಾರ್ಯಪಡೆ ಒಡಿಶಾದ ಜೈಪುರ ಜಿಲ್ಲೆಯ ನ್ಯೂಲ್‌ಪುರ ಗ್ರಾಮದಲ್ಲಿಸೈಯದ್ ಇಶಾನ್ ಬುಖಾರಿಯನ್ನು ಶನಿವಾರ ಬಂಧಿಸಿದ್ದಾರೆ.

ಹಲವಾರು ನಕಲಿ ಗುರುತುಗಳನ್ನು ಹೊಂದಿರುವ ಈತ ಪಾಕಿಸ್ತಾನದ ಹಲವಾರು ಜನರೊಂದಿಗೆ ಮತ್ತು ಕೇರಳದ ಕೆಲವು ಮಂದಿಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಎಸ್‌ಟಿಎಫ್ ಇನ್ಸ್‌ಪೆಕ್ಟರ್ ಜನರಲ್ ಜೆ.ಎನ್.ಪಂಕಜ್ ಹೇಳಿದ್ದಾರೆ.

ಈತ ಯುಎಸ್‌ನ ಉನ್ನತ ಐವಿ ಲೀಗ್ ಕಾಲೇಜಾಗಿರುವ ಕಾರ್ನೆಲ್ ವಿಶ್ವವಿದ್ಯಾಲಯದ ನಕಲಿ ವೈದ್ಯಕೀಯ ಪದವಿ ಪ್ರಮಾಣಪತ್ರ ಹೊಂದಿದ್ದ. ಕೆನಡಿಯನ್ ಹೆಲ್ತ್ ಸರ್ವಿಸಸ್ ಇನ್‌ಸ್ಟಿಟ್ಯೂಟ್ ಮತ್ತು ತಮಿಳಿನಲ್ಲಿ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್‌ನಿಂದ ವೈದ್ಯಕೀಯ ಪ್ರಮಾಣಪತ್ರವನ್ನು ನಕಲಿ ಮಾಡಿದ್ದ.ಅಂತಾರಾಷ್ಟ್ರೀಯ ಪದವಿಗಳು, ಅಫಿಡವಿಟ್‌ಗಳು, ಬಾಂಡ್‌ಗಳು, ಎಟಿಎಂ ಕಾರ್ಡ್‌ಗಳು, ಖಾಲಿ ಚೆಕ್‌ಗಳು, ಆಧಾರ್ ಕಾರ್ಡ್‌ಗಳು ಮತ್ತು ವಿಸಿಟಿಂಗ್ ಕಾರ್ಡ್‌ಗಳನ್ನು ಇಟ್ಟುಕೊಂಡು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದ.

ಎಸ್‌ಟಿಎಫ್ ತಂಡಕ್ಕೆ ದೊರೆತ ಸುಳಿವು ಆಧರಿಸಿ ಪೊಲೀಸರು ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ದಾಖಲೆಗಳು ಮತ್ತು ಹಲವಾರು ವಸ್ತುಗಳನ್ನು ವಂಚಕನಿಂದ ವಶಪಡಿಸಿಕೊಂಡಿದ್ದಾರೆ.

Comments (0)
Add Comment