ಪ. ಬಂಗಾಳದಲ್ಲಿ ಕಾಂಗ್ರೆಸ್-ಟಿಎಂಸಿ ನಡುವೆ ಜಿದ್ದಾಜಿದ್ದಿ : ‘ರಾಹುಲ್ ರ್‍ಯಾಲಿಗೆ ಅನುಮತಿ ನಿರಾಕರಣೆ

ಪಶ್ಚಿಮ ಬಂಗಾಳ:ಪಶ್ಚಿಮ ಬಂಗಾಳದಲ್ಲಿ ಭಾರತ ಜೋಡೊ ನ್ಯಾಯಯಾತ್ರೆಯ ಭಾಗವಾಗಿ ಕೆಲವು ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಅನುಮತಿ ಪಡೆಯುವಲ್ಲಿ ಕಾಂಗ್ರೆಸ್ ಪಕ್ಷವು ಸಮಸ್ಯೆಗಳು ಎದುರಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವು ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಬಯಸಿದೆ, ಆದರೆ ಶಾಲಾ ಪರೀಕ್ಷೆಗಳ ಕಾರಣ ಅನುಮತಿ ಸಿಗುತ್ತಿಲ್ಲ ಎಂದು ತಿಳಿಸಿದರು.

ಪರೀಕ್ಷೆ ಇರುವುದರಿಂದ ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ನಮಗೆ ಅನುಮತಿ ಸಿಗುತ್ತಿಲ್ಲ. ಭಾರತ ಜೋಡೊ ನ್ಯಾಯಯಾತ್ರೆಯು ಅಸ್ಸಾಂ ಸೇರಿದಂತೆ ಈಶಾನ್ಯದಲ್ಲಿ ಸಮಸ್ಯೆಗಳನ್ನು ಎದುರಿಸಿದೆ. ಈಗ ಟಿಎಂಸಿ ಆಡಳಿತದ ಪಶ್ಚಿಮ ಬಂಗಾಳದಲ್ಲಿ ಕೂಡ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದ ಕೆಲವು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳಿಗೆ ಅನುಮತಿ ಸಿಗಬಹುದು ಎಂದು ನಾವು ಭಾವಿಸಿದ್ದೆವು. ಆದರೆ, ಆಡಳಿತವು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇ ಳುತ್ತಿದೆ ಎಂದು ಚೌಧರಿ ತಿಳಿಸಿದರು.

Comments (0)
Add Comment