ಫಿಲಿಪೈನ್ಸ್‌ನಲ್ಲಿ ಭೂಕುಸಿತ : ಮೃತರ ಸಂಖ್ಯೆ 54 ಕ್ಕೆ ಏರಿಕೆ, 63 ಮಂದಿ ನಾಪತ್ತೆ

ಫಿಲಿಪೈನ್ಸ್‌: ದಕ್ಷಿಣ ಫಿಲಿಪೈನ್ಸ್‌ನಲ್ಲಿ ಚಿನ್ನದ ಗಣಿಗಾರಿಕೆ ನಡೆಯುವಂತ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು ಸಾವನ್ನಪ್ಪಿದವರ ಸಂಖ್ಯೆ 54 ಕ್ಕೆ ಏರಿದೆ. 63 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರಗಳಿಂದ ಸುರಿದ ಧಾರಾಕಾರ ಮಳೆಯ ನಂತರ ಫೆ.6 ರಂದು ರಾತ್ರಿ ದವಾವೊ ಡಿ ಓರೊ ಪ್ರಾಂತ್ಯದ ಮಸಾರಾ ಎಂಬ ಪರ್ವತ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ.

ಪೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿ ನೆಲೆಗೊಂಡಿರುವ ಈ ದ್ವೀಪಸಮೂಹವು ಹಲವು ಬಾರಿ ಪ್ರಬಲವಾದ ಬಿರುಗಾಳಿಗಳಿಂದ ಹೊಡೆತಕ್ಕೆ ಸಿಲುಕುತ್ತದೆ, ಭೂಕಂಪವೂ ಉಂಟಾಗುತ್ತಿರುತ್ತದೆ, ಇದು ಹಠಾತ್ ಪ್ರವಾಹಗಳು ಮತ್ತು ಭೂಕುಸಿತಗಳನ್ನು ಉಂಟುಮಾಡುತ್ತದೆ ಮತ್ತು ಜ್ವಾಲಾಮುಖಿ ಸ್ಫೋಟಗಳಿಂದ ಸಾಕಷ್ಟು ಬಾರಿ ನಲುಗಿದೆ.

ಸುಮಾರು 50 ಗಂಟೆಗಳ ಕಾಲ ಅವಶೇಷಗಳಡಿ ಹೂತುಹೋಗಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಣಾ ಪಡೆ ಜೀವಂತವಾಗಿ ಹೊರತೆಗೆದಿದ್ದು ಕಾರ್ಯಾಚರಣೆ ಮುಂದುವರೆದಿದೆ.

Comments (0)
Add Comment