ಫೆಬ್ರುವರಿ ತಿಂಗಳ ರೇಷನ್ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ..!

ಆತ್ಮೀಯ ಗ್ರಾಹಕರೇ ಫೆಬ್ರುವರಿ ತಿಂಗಳ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಮಾಡಿದ್ದಾರೆ ಯಾರಿಗೆ ಈ ತಿಂಗಳ ರೇಷನ್ ಬರುತ್ತದೆ ಮತ್ತು ಯಾರ ರೇಷನ್ ಕಾರ್ಡ್ ರದ್ದಾಗಿವೆ ಎಲ್ಲದರ ಮಾಹಿತಿಯನ್ನು ಆಹಾರ ಇಲಾಖೆಯ ಪೋರ್ಟಲ್ಲಿ ಅಪ್ಡೇಟ್ ಮಾಡಲಾಗಿದೆ ಹೀಗಾಗಿ ಈ ತಿಂಗಳ ರೇಷನ್ ಕಾರ್ಡ್ ಪಟ್ಟಿಯನ್ನು ನೀವು ನಿಮ್ಮ ಮೊಬೈಲ್ ನಲ್ಲಿಯೂ ನೋಡಬಹುದು ಅದನ್ನು ಹೇಗೆ ನೋಡುವುದು ಮತ್ತು ಯಾವ ರೀತಿಯಾಗಿ ನಿಮ್ಮ ಹೆಸರನ್ನು ಅಥವಾ ನಿಮ್ಮ ಊರಿನ ಯಾರಿಗಲ್ಲ ಒಂದು ಈ ತಿಂಗಳ ರೇಷನ್ ಬರಲಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಸುಲಭವಾಗಿ ಮೊಬೈಲ್ ನಲ್ಲಿ ಅಥವಾ ಆನ್ಲೈನ್ ನಲ್ಲಿ ಅಥವಾ ಲ್ಯಾಪ್ಟಾಪ್ ನಲ್ಲಿ ಯಾವುದಾದರೂ ಒಂದನ್ನು ಬಳಸಿ ನೀವು ತಿಳಿದುಕೊಳ್ಳಬಹುದು ಸುಲಭ ವಿಧಾನ ಏನೆಂದರೆ ಮೊಬೈಲ್ ಸಾಮಾನ್ಯವಾಗಿ ಎಲ್ಲರೂ ಬಳಕೆ ಮಾಡುವುದರಿಂದ ಮೊಬೈಲ್ ನಲ್ಲಿ ಯಾವ ರೀತಿಯಾಗಿ ಈ ತಿಂಗಳ ರೇಷನ್ ಕಾರ್ಡ್ ಪಟ್ಟಿಯನ್ನು ನೋಡುವುದನ್ನು ತಿಳಿದುಕೊಳ್ಳೋಣ ಬನ್ನಿ.

ಫೆಬ್ರುವರಿ ತಿಂಗಳ ಅರ್ಹ ರೇಷನ್ ಕಾರ್ಡ್ ಫಲಾನುಭವಿಗಳ ಪಟ್ಟಿ ಚೆಕ್ ಮಾಡುವುದು ಹೇಗೆ?

ಮೊಟ್ಟಮೊದಲಿಗೆ ನೀವು ನಿಮ್ಮ ಫೆಬ್ರವರಿ ತಿಂಗಳ ರೇಷನ್ ಕಾರ್ಡ್ ಪಟ್ಟಿಯನ್ನು ನೋಡಬೇಕಾದರೆ ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಹೋಗಬೇಕಾಗುತ್ತದೆ ಅಥವಾ ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ನೇರವಾಗಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವ ಪೇಜ್ ಓಪನ್ ಆಗುತ್ತದೆ.

https://ahara.kar.nic.in/Home/EServices  ಇದನ್ನು ಓಪನ್ ಮಾಡಿಕೊಂಡು ಇದರಲ್ಲಿ ಈ ರೇಷನ್ ಕಾರ್ಡ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದಾಗ ಅದರಲ್ಲಿ ವಿಲೇಜ್ ಲಿಸ್ಟ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಅದನ್ನು ಕ್ಲಿಕ್ ಮಾಡಿದ ಮೇಲೆ ನಿಮಗೆ ಇಲ್ಲಿ ಆಯ್ಕೆಯನ್ನು ಮಾಡಲು ಕೇಳುತ್ತದೆ ಮೊಟ್ಟಮೊದಲಿಗೆ ನಿಮಗೆ ಇಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಲು ಕೇಳುತ್ತದೆ ಅದಾದ ನಂತರ ನಿಮ್ಮ ತಾಲೂಕನ್ನು ಆಯ್ಕೆ ಮಾಡಿಕೊಳ್ಳಲು ಕೇಳುತ್ತದೆ ಅದಾದ ನಂತರ ನಿಮ್ಮ ಊರನು ಆಯ್ಕೆ ಮಾಡಿಕೊಳ್ಳಲು ಕೇಳುತ್ತದೆ ಇಷ್ಟಾದ ಮೇಲೆ ಸಾಕು ನೀವು ಕೆಳಗಡೆ ಗೂ ಎಂದು ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು.

ಈ ತಿಂಗಳ ಅರ್ಹ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ ಅದರಲ್ಲಿ ನಿಮ್ಮ ಹೆಸರನ್ನು ಸರಿಯಾಗಿ ನೋಡಿಕೊಳ್ಳಿ ಲಿಸ್ಟ್ ತುಂಬಾ ದೊಡ್ಡದಾಗಿರುತ್ತದೆ ಏಕೆಂದರೆ ಊರಿನವಾರು ನಿಮಗೆ ಲಿಸ್ಟ್ ಬಿಡುಗಡೆ ಮಾಡಿರುವುದರಿಂದ ನೀವು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ. ಅಲ್ಲಿ ಹಲವಾರು ಪೇಜ್ ಗಳು ನೀಡುತ್ತಾರೆ ಉದಾಹರಣೆಗೆ ಒಂದನೇ ಪೇಜ್ ನಲ್ಲಿ 20 ಹೆಸರುಗಳನ್ನು ನೀಡಿದರೆ ಎರಡನೇ ಪೇಜಿನಲ್ಲಿ ಮತ್ತೆ 20 ಹೆಸರುಗಳು ಇರುತ್ತವೆ. ಹೀಗಾಗಿ ನಿಮಗೆ ಒಂದು ಸುಲಭ ವಿಧಾನ ಯಾವ ರೀತಿಯಾಗಿ ನೋಡಿದು ಯಾವ ತರನಾಗಿ ಎಂದು ಹೇಳುವುದಾದರೆ. ಮೊಟ್ಟಮೊದಲನೆಯ ಅಕ್ಷರ ಎ ದಿಂದ ಪ್ರಾರಂಭವಾಗುತ್ತದೆ ನಂತರ ಬಿ ನಿಂದ ಪ್ರಾರಂಭವಾಗುತ್ತದೆ ಇದೇ ರೀತಿಯಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಅಲ್ಲಿಯವರೆಗೆ ಅದರ ಪೇಜ್ ಅನ್ನು ಬದಲಾಯಿಸುತ್ತಾ ಹೋಗಿ ಅಲ್ಲಿಂದ ನೀವು ಸುಲಭವಾಗಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಿಕೊಳ್ಳಬಹುದು.

Comments (0)
Add Comment