ಫೆ.23 ಮತ್ತು 24ರಂದು ಸೂಕ್ಷ್ಮ ಮತ್ತು ತುಂತುರ ನೀರಾವರಿ ಘಟಕಗಳ ಉಪಯೋಗ ಮತ್ತು ನಿರ್ವಹಣೆ ಕುರಿತು ತರಬೇತಿ

 

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಫೆ.23 ರಂದು ಹೊಸದುರ್ಗ ತಾಲ್ಲೂಕಿನ ಮತ್ತೋಡು ಮತ್ತು ಶ್ರೀರಾಂಪುರ ಹೋಬಳಿಯ ರೈತರಿಗೆ ಹಾಗೂ ಫೆ.24ರಂದು ಹೊಸದುರ್ಗ ಕಸಬಾ ಮತ್ತು ಮಾಡದಕೆರೆ ಹೋಬಳಿಯ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಮತ್ತು ತುಂತುರ ನೀರಾವರಿ ಘಟಕಗಳ ಉಪಯೋಗ ಮತ್ತು ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 10.30ಕ್ಕೆ  ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ನೆಟಾಪಿನ್ ಇರಿಗೇಷನ್ ಇಂಡಿಯಾದ ಬೇಸಾಯ ತಜ್ಞರಾದ ಅಂಜಿನಪ್ಪ ಅವರು ನೀರಿನ ಸಮರ್ಥ ಬಳಕೆ, ಹನಿ ನೀರಾವರಿ ಮತ್ತು ಸ್ಪ್ರೀಂಕ್ಲರ್ ಘಟಕಗಳ ಉಪಯೋಗ ಮತ್ತು ಅವುಗಳ ನಿರ್ವಹಣೆಯಕುರಿತುವಿಷಯ ಮಂಡನೆಮತ್ತು ಪ್ರಾತ್ಯಕ್ಷಿಕೆ ನೀಡುವರು.

ಫೆ.23ರಂದು ಹೊಸದುರ್ಗ ತಾಲ್ಲೂಕಿನ ಮತ್ತೋಡು ಮತ್ತು ಶ್ರೀರಾಂಪುರ ಹೋಬಳಿಯ 60 ಜನ ಆಸಕ್ತ ರೈತರು ಹಾಗೂ ಫೆ.24ರಂದು ಹೊಸದುರ್ಗ ಕಸಬಾ ಮತ್ತು ಮಾಡದಕೆರೆ ಹೋಬಳಿಯ 60 ಜನ ಆಸಕ್ತ ರೈತರು ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆರ್.ರಜನೀಕಾಂತ, ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂ (8277931058), ಟಿ.ಪಿ.ರಂಜಿತಾ, ಕೃಷಿ ಅಧಿಕಾರಿ (8277930959), ಸಿಕಂದರ್ ಬಾಷಾ, ಕೃಷಿ ಅಧಿಕಾರಿ (8277931058) ಮತ್ತು ಪವಿತ್ರಾ ಎಂ. ಜೆ. (9535412286) ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿದೆ. ಮೊದಲು ನೋಂದಾವಣಿ ಮಾಡಿಕೊಂಡ 60 ಜನ ರೈತ ಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಫೆ.23 ಮತ್ತು 24ರಂದು ಸೂಕ್ಷ್ಮ ಮತ್ತು ತುಂತುರ ನೀರಾವರಿ ಘಟಕಗಳ ಉಪಯೋಗ ಮತ್ತು ನಿರ್ವಹಣೆ ಕುರಿತು ತರಬೇತಿ
Comments (0)
Add Comment