ಫ್ರಿಡ್ಜ್ ನಲ್ಲಿರಿಸಿದ ತಂಪಾದ ನೀರು ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮ

ಫ್ರಿಡ್ಜ್ ನಲ್ಲಿರಿಸಿದ ತಂಪಾದ ನೀರು ಕುಡಿಯುವುದು ಹಿತವೆನಿಸುತ್ತದೆ. ಬೇಸಿಗೆ ಕಾಲದಲ್ಲಿ ಹಲವರಿಗೆ ಬಿಸಿಲಿನಿಂದ ಬಂದ ತಕ್ಷಣ ಫ್ರಿಡ್ಜ್ ನೀರು ಕುಡಿಯುವ ಅಭ್ಯಾಸವಿರುತ್ತದೆ.

ಕೆಲವರಿಗಂತೂ ಬಿಸಿలు ಜಾಸ್ತಿಯಾಗುತ್ತಿದ್ದಂತೆಯೇ ಕೋಲ್ಡ್ ನೀರು ಬೇಕೇ ಬೇಕು ಎನಿಸುತ್ತದೆ. ಆದರೆ ಫ್ರಿಡ್ಜ್ ನಲ್ಲಿರುವ ನೀರು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ವೈದ್ಯರು ಸಾಧ್ಯವಾದಷ್ಟು ನೀರು ಕುಡಿಯುವಂತೆ ಸಲಹೆ ನೀಡುತ್ತಾರೆ. ಕೆಲವರು ತಣ್ಣೀರು ಹೆಚ್ಚು ಕುಡಿಯುತ್ತಾರೆ. ಬಿಸಿಲ ಬೇಗೆಯಲ್ಲಿ ಕೋಲ್ಡ್ ನೀರು ಕುಡಿಯುವುದು ಒಂದು ಕ್ಷಣಕ್ಕೆ ಹಿತ ಎನಿಸಬಹುದು.

ಆದರೆ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವಬೀರುತ್ತದೆ. ಊಟದ ನಂತರ ಫ್ರಿಡ್ಜ್‌ನಲ್ಲಿರೋ ತಣ್ಣೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಕೊಬ್ಬಿನಂಶ ಹಾಗೆಯೇ ಉಳಿದು ಹೋಗುತ್ತದೆ. ತಿಂದಿದ್ದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಪರಿಣಾಮ ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾಗಬಹುದು.ತಣ್ಣೀರು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ತಡೆಯುತ್ತದೆ. ಆಹಾರದೊಂದಿಗೆ ಕೋಲ್ಡ್ ವಾಟರ್ ಬೆರೆತಾಗ ಅದರಲ್ಲಿರುವ ಕೊಬ್ಬಿನಂಶ ಗಟ್ಟಿಯಾಗಿಬಿಡುತ್ತದೆ. ಮತ್ತದನ್ನು ಜೀರ್ಣಿಸಿಕೊಳ್ಳಲು ದೇಹ ಕಷ್ಟಪಡುತ್ತದೆ.

ಫ್ರಿಡ್ಜ್ ನಲ್ಲಿರಿಸಿದ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳಿಸುವ ಸಾಧ್ಯತೆಯಿದೆ. ಹಾಗಾಗಿ, ಬೇಸಿಗೆಯಲ್ಲಿಯೂ ಸಾಮಾನ್ಯ ನೀರನ್ನು (ಫ್ರಿಜ್ ನಲ್ಲಿರಿಸದ) ಕುಡಿಯಲು ಪ್ರಯತ್ನಿಸಿ. ಹೀಗೆ ಮಾಡಿದಾಗ ಕೆಲವು ಕಾಯಿಲೆಗಳನ್ನು ಕೂಡಾ ನಾವು ದೂರವಿರಿಸಬಹುದು. ಫ್ರಿಡ್ಜ್ ನಲ್ಲಿರಿಸಿದ ನೀರು ಕುಡಿದ ತಕ್ಷಣ ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾದಾಗ ತಲೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅತಿಯಾಗಿ ತಂಪಾದ ನೀರು ಕುಡಿಯುವುದರಿಂದ ‘ಮೆದುಳು ಫ್ರೀಜ್ ಸಮಸ್ಯೆ ಉಂಟಾಗುತ್ತದೆ. ಫ್ರಿಡ್ಜ್ ನಲ್ಲಿರಿಸಿದ ನೀರು ಬೆನ್ನುಮೂಳೆಯ ಸೂಕ್ಷ್ಮ ನರಗಳನ್ನು ತಂಪಾಗಿಸುತ್ತದೆ, ಇದರಿಂದಾಗಿ ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.

ಈ ಕಾರಣಕ್ಕಾಗಿ ತಲೆನೋವು, ಸೈನಸ್ ಸಮಸ್ಯೆ ಸಂಭವಿಸಬಹುದು. ತಣ್ಣಗಿನ ನೀರು ಕುಡಿಯುವುದರಿಂದ ನರಗಳ ಕಾರ್ಯಕ್ಕೆ ಅಡ್ಡಿಯಾಗಬಹುದು. ಹೃದಯ ಬಡಿತವನ್ನು ಸ್ಥಿರವಾಗಿಡಲು ಸಹಾಯ ಮಾಡುವ ನರಗಳ ಕಾರ್ಯಕ್ಕೆ ಅಡ್ಡಿಯಾದರೆ ಹೃದಯ ಬಡಿತವೇ ನಿಧಾನವಾಗುವ ಅಪಾಯವಿರುತ್ತದೆ. ಫ್ರಿಡ್ಜ್ ವಾಟರ್ ಕುಡಿದಾಗ ನಿಮ್ಮ ದೇಹವು ಸಾಮಾನ್ಯ ತಾಪಮಾನಕ್ಕೆ ಮರಳಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಶಕ್ತಿಯನ್ನು ಬಳಸಲಾಗುವುದಿಲ್ಲ. ಇದು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ.ತಣ್ಣೀರು ಅನ್ನನಾಳದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದು ಅನೇಕ ಸೋಂಕುಗಳಿಗೆ ಕಾರಣವಾಗಬಹುದು. ಇದರಿಂದ ಗಂಟಲು ನೋವು ಕೂಡ ಶುರುವಾಗಬಹುದು.

Comments (0)
Add Comment