‘ಫ್ರೆಂಡ್ಸ್​’ ಖ್ಯಾತಿಯ ನಟ ಮ್ಯಾಥ್ಯು ಪೆರ್ರಿ ಅನುಮಾನಾಸ್ಪದ ಸಾವು

ಅಮೆರಿಕದ ಜನಪ್ರಿಯ ಟೆಲಿವಿಷನ್​ ಸೀರಿಸ್​ ‘ಫ್ರೆಂಡ್ಸ್​’ ಮೂಲಕ ಭಾರಿ ಪ್ರಸಿದ್ಧಿ ಪಡೆದಿದ್ದ ನಟ ಮ್ಯಾಥ್ಯು ಪೆರ್ರಿ ಅವರು ಅನುಮಾನಾಸ್ಪದ ರೀತಿಯಲ್ಲಿ ನಿಧನರಾಗಿದ್ದಾರೆ. ಮ್ಯಾಥ್ಯು ಪೆರ್ರಿ ಅವರು ಶನಿವಾರ (ಅಕ್ಟೋಬರ್​ 28) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಹಾಟ್​ ಟಬ್​ನಲ್ಲಿ ಅವರ ಮೃತದೇಹ ಪತ್ತೆ ಆಗಿದೆ. ಮ್ಯಾಥ್ಯು ಪೆರ್ರಿ ಅವರಿಗೆ 54 ವರ್ಷ ವಯಸ್ಸಾಗಿತ್ತು. ಮ್ಯಾಥ್ಯು ಪೆರ್ರಿ ಅವರು 1994ರಿಂದ 2004ರವರೆಗೆ 10 ಸೀಸನ್‌ಗಳಲ್ಲಿ ಪ್ರಸಾರವಾದ “ಫ್ರೆಂಡ್ಸ್”ನಲ್ಲಿ ಚಾಂಡ್ಲರ್​ ಬೇಂಗ್​ ಪಾತ್ರ ಬಹಳ ಜನಪ್ರಿಯತೆ ಗಳಿಸಿತ್ತು. ಲಾಸ್​ ಏಂಜಲೀಸ್​ನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಹಾಟ್​ ಟಬ್​ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರು ಮತ್ತೆ ಏಳಲೇ ಇಲ್ಲ ಎಂದು ವರದಿಯಾಗಿದೆ. ಮ್ಯಾಥ್ಯು ಪೆರ್ರಿ ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ‘ಫೂಲ್ಸ್​ ರಶ್​ ಇನ್​’, ‘ದಿ ಹೋಲ್​ ನೈನ್​ ಯಾರ್ಡ್ಸ್​’ ಸೇರಿದಂತೆ ಒಂದಷ್ಟು ಹಾಲಿವುಡ್ ಸಿನಿಮಾಗಳಲ್ಲಿ ಮ್ಯಾಥ್ಯು ಪೆರ್ರಿ ಅವರು ಅಭಿನಯಿಸಿ ಫೇಮಸ್​ ಆಗಿದ್ದರು. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದರು.

Comments (0)
Add Comment