ಬಜೆಟ್ ಮಂಡನೆಗೆ ಸಂಸತ್ತಿಗೆ ಆಗಮಿಸಿದ ನಿರ್ಮಲಾ ಸೀತಾರಾಮ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 6 ನೇ ಬಜೆಟ್ ಮಂಡನೆಗಾಗಿ ಇಂದು ಸಂಸತ್ತಿ ಗೆ ಆಗಮಿಸಿದ್ದಾರೆ. ಕೇಂದ್ರದ ಮದ್ಯಂತರ ಬಜೆಟ್ ಅನ್ನು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.

ಈ ಬಾರಿಯ ಬಜೆಟ್ ಅನ್ನು ಕಳೆದ ಮೂರು ವರ್ಷಗಳಂತೆಯೇ ಕಾಗದ ರಹಿತ ವಾಗಿ ಮಂಡಿಸಲು ಬುದವಾರ ಸಂಸತ್ತಿಗೆ ತೆರಳುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೆ ಸಾಂಪ್ರದಾಯಿಕ ‘ಬಹಿ-ಖಾತಾ’ ಶೈಲಿಯ ಕೆಂಪು ಚೀಲದಲ್ಲಿ(ಬಟ್ಟೆಯ ಲೆಡ್ಜರ್) ಡಿಜಿಟಲ್ ಟ್ಯಾಬ್ಲೆಟ್ ಅನ್ನು ತೆಗೆದುಕೊಂಡು ಬಂದಿದ್ದಾರೆ.

ಈ ಬಾರಿ ಬಜೆಟ್ ಅನ್ನು ಡಿಜಿಟಲ್ ರೂಪದಲ್ಲಿ ಪ್ರಸ್ತುತಪಡಿಸಲಿದ್ದಾರೆ. 2019 ರಲ್ಲಿ ಕೇಂದ್ರ ಬಜೆಟ್ ಅನ್ನು ಚರ್ಮದ ಬ್ರೀಫ್ ಕೇಸ್ ಬದಲಿಗೆ ಸಾಂಪ್ರದಾಯಿಕ ‘ಬಹಿ-ಖಾತಾ’ದಲ್ಲಿ ಮಂಡಿಸಲಾಯಿತು. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಹಣಕಾಸು ಸಚಿವರು ಬ್ರೀಫ್‌ಕೇಸ್ ಇಲ್ಲದೆ ಬಜೆಟ್ ಮಂಡಿಸಿದ್ದರು.

Comments (0)
Add Comment