ಬಡ ಕೈದಿಗಳಿಗೆ ಜಾಮೀನು ಪಡೆಯಲು ಕೇಂದ್ರ ನೆರವು

ಜಾಮೀನು ಪಡೆಯುವ ಅವಕಾಶವಿದ್ದರೂ ಹಣ ಕೊಡಲು ಸಾಧ್ಯವಾಗದೆ ಜೈಲಿನಲ್ಲಿರುವ ಕೈದಿಗಳ ಕೇಂದ್ರ ಸರ್ಕಾರ ಜಾಮೀನು ಹಣ ಪಾವತಿಗೆ 20ಕೋಟಿ ಬಿಡುಗಡೆ ಮಾಡಿದೆ.

ರಾಜ್ಯಕ್ಕೆ ಒಬ್ಬರಂತೆ ನೋಡಲ್ಲ ಅಧಿಕಾರಿಗಳನ್ನು ನೇಮಕ ಮಾಡಲು ತಿಳಿಸಿದ್ದು, ನೋಡಲ್‌ ಅಧಿಕಾರಿಗಳು ಕೇಂದ್ರ ಗೃಹ ಇಲಾಖೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ನೋಡಲ್‌ ಅಧಿಕಾರಿಯೊಂದಿಗೆ ಸಂಪರ್ಕಿಸಿ ಕಾರ್ಯನಿರ್ವಹಿಸಲಿದ್ದಾರೆ.
ಈ ಮೂಲಕ ಜಾಮೀನು ಪಡೆಯುವ ಅವಕಾಶ ಇದ್ದರೂ ಅದಕ್ಕೆ ಅಗತ್ಯವಿರುವ ಹಣ ನೀಡಲು ಸಾಧ್ಯವಾಗದಿರುವ ಕೈದಿಗಳ ನೆರವಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಲಾಗಿದೆ.

Comments (0)
Add Comment