ಬಾಬರ್ ರಸ್ತೆ ನಾಮಫಲಕ ಅಳಿಸಿ ಅಯೋಧ್ಯ ಮಾರ್ಗ ಪೋಸ್ಟರ್ ಅಂಟಿಸಿದ ಹಿಂದೂ ಕಾರ್ಯಕರ್ತರು

ನವದೆಹಲಿ: ದೆಹಲಿಯಲ್ಲಿರುವ ಬಾಬರ್ ರಸ್ತೆಯ ನಾಮಫಲಕಗಳ ಮೇಲೆ ‘ಅಯೋಧ್ಯ ಮಾರ್ಗ’ ಎಂಬ ಪೋಸ್ಟರ್‌ಗಳನ್ನು ಹಿಂದೂ ಸೇನಾ ಕಾರ್ಯಕರ್ತರು ಅಂಟಿಸಿರುವುದು ಬೆಳಕಿಗೆ ಬಂದಿದೆ.

ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯೆ ರಸ್ತೆ ಎಂದು ಬದಲಾಯಿಸುವಂತೆ ಹಿಂದೂ ಸೇನಾ ಕಾರ್ಯಕರ್ತರು ಒತ್ತಾಯಿಸಿದ್ದು, ಇದೀಗ ಬಾಬರ್ ರಸ್ತೆಯ ಫಲಕದ ಮೇಲೆ ಅಯೋಧ್ಯೆ ಮಾರ್ಗ ಎಂದು ಪೋಸ್ಟರ್ ಅನ್ನು ಅಂಟಿಸಿ ಅಧಿಕೃತವಾಗಿ ಅಯೋಧ್ಯೆ ಮಾರ್ಗ ರಸ್ತೆಯ ಹೆಸರನ್ನು ಬದಲಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ, ಬಾಬರ್ ರಸ್ತೆಯ ಹೆಸರನ್ನು ಬದಲಾಯಿಸಬೇಕೆಂದು ಹಿಂದೂ ಸೇನೆ ಬಹಳ ದಿನಗಳಿಂದ ಒತ್ತಾಯಿಸುತ್ತಿದೆ. ಭಗವಾನ್ ಶ್ರೀರಾಮ, ಶ್ರೀ ಕೃಷ್ಣ, ಶ್ರೀ ವಾಲ್ಮೀಕಿ, ಗುರು ರವಿದಾಸರಂತಹ ಮಹಾಪುರುಷರ ದೇಶ ಭಾರತ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಬಾಬರ್‌ನ ಬಾಬ್ರಿ ಮಸೀದಿಯೇ ಇನ್ನಿಲ್ಲದಿರುವಾಗ, ದೆಹಲಿಯ ಬಾಬರ್ ರಸ್ತೆಯಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.

Comments (0)
Add Comment