ಬಾಲಕನ ಶ್ವಾಸಕೋಶದಲ್ಲಿದ್ದ ಸೂಜಿ ಹೊರತೆಗೆದ ವೈದ್ಯರು

ಡಿಶಾ: 9 ವರ್ಷದ ಬಾಲಕನ ಶ್ವಾಸಕೋಶದಲ್ಲಿದ್ದ ಹೊಲಿಗೆ ಸೂಜಿಯನ್ನು ಹೊರ ತೆಗೆಯುವಲ್ಲಿ ಭುವನೇಶ್ವರದ ವೈದ್ಯರು ಯಶಸ್ವಿಯಾಗಿದ್ದಾರೆ. ಒಡಿಶಾದ ಭುವನೇಶ್ವರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ನ ಮಕ್ಕಳ ವೈದ್ಯರು 9 ವರ್ಷದ ಬಾಲಕನ ಶ್ವಾಸಕೋಶದಲ್ಲಿ ನಾಲ್ಕು ಸೆಂಟಿಮೀಟರ್ ಉದ್ದದ ಹೊಲಿಗೆ ಸೂಜಿಯನ್ನು ಹೊರತೆಗೆಯುವ ಮೂಲಕ ಬಾಲಕನ ಜೀವವನ್ನು ಉಳಿಸಿದ್ದಾರೆ.

 

ಪಶ್ಚಿಮ ಬಂಗಾಳದಿಂದ ಬಂದ 9 ವರ್ಷದ ಬಾಲಕನ ಶ್ವಾಸಕೋಶದಲ್ಲಿ ಎಡ ಕೆಳಗಿನ ಭಾಗದಲ್ಲಿ ಹೊಲಿಗೆ ಯಂತ್ರದ ಸೂಜಿ ಇತ್ತು. ಸೂಜಿ ಇರುವುದು ತಿಳಿದ ಕೂಡಲೇ ಬಾಲಕನ ಪೋಷಕರು ಭುವನೇಶ್ವರದ ಏಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭುವನೇಶ್ವರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್)ನ ಮಕ್ಕಳ ತಜ್ಞರು ತಪಾಸಣೆ ನಡೆಸಿ, ಶಸ್ತ್ರಚಿಕಿತ್ಸೆ ಮೂಲಕ ಬಾಲಕನ ಶ್ವಾಸಕೋಶದಲ್ಲಿದ್ದ ಸೂಜಿಯನ್ನು ಹೊರ ತೆಗೆದಿದ್ದಾರೆ.

ಏಮ್ಸ್‌ನ ಮಕ್ಕಳ ವೈದ್ಯರು ಬ್ರಾಂಕೋಸ್ಕೋಪಿಕ್ ವಿಧಾನ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ, ಬಾಲಕನ ಶ್ವಾಸಕೋಶದಲ್ಲಿದ್ದ ಹೊಲಿಗೆ ಯಂತ್ರದ ಸೂಜಿ ಹೊರತೆಗೆಯಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಡಾ. ರಶ್ಮಿ ರಂಜನ್ ದಾಸ್, ಡಾ. ಕೃಷ್ಣ ಎಂ. ಗುಲ್ಲಾ, ಡಾ. ಕೇತನ್ ಮತ್ತು ಡಾ. ರಾಮಕೃಷ್ಣ ಅವರನ್ನೊಳಗೊಂಡ ಶಿಶುವೈದ್ಯರ ತಂಡವು ಯಾವುದೇ ತೊಡಕುಗಳನ್ನು ಎದುರಿಸದೆ ಸೂಜಿಯನ್ನು ಹೊರತೆಗೆಯಲು ಬ್ರಾಂಕೋಸ್ಕೋಪಿಕ್ ನಡೆಸಿದ್ದಾರೆ.

ಸುಮಾರು ಒಂದು ಗಂಟೆ ಕಾಲ ಶಸ್ತ್ರಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ. ಯಾವುದೇ ವಿದೇಶಿ ಶಸ್ತ್ರಚಿಕಿತ್ಸೆಯಿಲ್ಲದೆ, ಒಡಿಶಾದ ಮಕ್ಕಳ ವೈದ್ಯರು ಮೊದಲ ಬಾರಿ ತೀಕ್ಷ್ಣವಾದ ವಸ್ತುವನ್ನು ಹೊರ ತೆಗೆದುಹಾಕಿದ್ದಾರೆ. ಸದ್ಯ ಬಾಲಕನ ಆರೋಗ್ಯವು ಚೇತರಿಸಿಕೊಳ್ಳುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅಶುತೋಷ್ ಬಿಸ್ವಾಸ್ ಅವರು ವೈದ್ಯರನ್ನು ಅಭಿನಂದಿಸಿದ್ದು, ಬಾಲಕನ ಜೀವ ಉಳಿಸಲು ಬಳಸಿದ ವಿಧಾನಕ್ಕೆ ಶ್ಲಾಘಿಸಿದ್ದಾರೆ.

ಶಸ್ತ್ರಚಿಕಿತ್ಸೆ ನಂತರ ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. AIIMS ಭುವನೇಶ್ವರದಲ್ಲಿ ಮತ್ತು ಭಾರತದಾದ್ಯಂತ ಕೆಲವೇ ಕೇಂದ್ರಗಳಲ್ಲಿ ಲಭ್ಯವಿರುವ ಈ ನವೀನ ಪ್ರಕ್ರಿಯೆಯು ತೀಕ್ಷ್ಣವಾದ ವಾಯುಮಾರ್ಗದ ವಿದೇಶಿ ಕಾಯಗಳನ್ನು ತೆಗೆದುಹಾಕಲು, ಕಡಿಮೆ ಆಕ್ರಮಣಶೀಲ ಹೊಂದಿಕೊಳ್ಳುವ ಬ್ರಾಂಕೋಸ್ಕೋಪಿಯನ್ನು ಬಳಸಲಾಗುತ್ತದೆ ಎಂದು ಏಮ್ಸ್‌ ತಿಳಿಸಿದೆ.

ದೆಹಲಿಯಲ್ಲೂ ಏಮ್ಸ್‌ ವೈದ್ಯರು ಕಳೆದ ವರ್ಷ 7 ವರ್ಷದ ಬಾಲಕನ ಶ್ವಾಸಕೋಶದಲ್ಲಿದ್ದ ಸೂಜಿಯನ್ನು ಹೊರ ತೆಗೆದಿದ್ದರು. ನವೆಂಬರ್ 05, 2023ರಲ್ಲಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ವೈದ್ಯರು, 7 ವರ್ಷದ ಬಾಲಕನ ಶ್ವಾಸಕೋಶದ ಎಡಭಾಗದಲ್ಲಿದ್ದ 4 ಸೆಂಟಿ ಮೀಟರ್‌ ಉದ್ದದ ಸೂಜಿಯನ್ನು ಸಂಕೀರ್ಣ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದರು.

Comments (0)
Add Comment