ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿ

ಕಝಾಕಿಸ್ತಾನ್‌: ಅಮೆರಿಕದ ಗಗನಯಾತ್ರಿ 371 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದ ನಂತರ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದಾರೆ.

ರೂಬಿಯೊ ಮತ್ತು ಅವರ ಇಬ್ಬರು ರಷ್ಯಾದ ಸಹೋದ್ಯೋಗಿ ಗಗನಯಾತ್ರಿಗಳಾದ ಸೆರ್ಗೆಯ್ ಪ್ರೊಕೊಪಿಯೆವ್ ಮತ್ತು ಡಿಮಿಟ್ರಿ ಪೆಟೆಲಿನ್ – ಬುಧವಾರದಂದು ಸ್ಥಳೀಯ ಸಮಯ 5:17 ಕ್ಕೆ (7:17 am ET) ರಷ್ಯಾದ ಸೊಯುಜ್ MS-23 ಕ್ಯಾಪ್ಸುಲ್‌ನಲ್ಲಿ ಕಝಾಕಿಸ್ತಾನ್‌ನಲ್ಲಿ ಲ್ಯಾಂಡಿಂಗ್‌ ಆದರು.

ಫ್ರಾಂಕ್‌ ರೂಬಿಯೊರನ್ನು 180 ದಿನಗಳ ಕಾರ್ಯಾಚರಣೆಗೆಕಳುಹಿಸಲಾಗಿತ್ತು. ಆದರೆ ಅವರ ಬಾಹ್ಯಾಕಾಶನೌಕೆಯ ಅಸಮರ್ಪಕ ಕಾರ್ಯದಿಂದಾಗಿ ಭೂಮಿಗೆಮರಳಲು ಸಾಧ್ಯವಾಗಲಿಲ್ಲ. ಫ್ರಾಂಕ್‌ ರೂಬಿಯೊಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ವಾಸಿಸಿದ ಅಮೆರಿಕನ್‌ ಗಗನ ಯಾತ್ರಿಯಾಗಿದ್ದಾರೆ. ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ದಿನ ತಂಗಿದ್ದ ದಾಖಲೆ ರಷ್ಯಾದ ವ್ಯಾಲೆರಿ ಪಾಲಿಯಾಕೋವ್‌ (437 ದಿನಗಳು) ಅವರ ಹೆಸರಿನಲ್ಲಿದೆ.

Comments (0)
Add Comment