ಬಿಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ – ರಾಜ್ಯ ಬಿಜೆಪಿ ನಾಯಕರಿಂದ ಆಕ್ರೋಶ

ಬೆಂಗಳೂರು: ಅಯೋಧ್ಯೆಗೆ ಜನವರಿ 22ರಂದು ತೆರಳುವ ಯಾತ್ರಿಗಳಿಗೆ ರಕ್ಷಣೆ ನೀಡಬೇಕು. ಗೋಧ್ರಾ ರೀತಿ ದುರಂತ ಸಂಭವಿಸುವ ಮಾಹಿತಿ ಇದೆ ಎಂದು ಎಂಎಲ್​ಸಿ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದು,ಈ ಹೇಳಿಕೆ ವಿರುದ್ದ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಪ್ರತಿಕ್ರಿಯಿಸಿ, ಅಹಿತಕರ ಘಟನೆಗಳು ನಡೆದರೇ ಅದಕ್ಕೆ ಬಿ.ಕೆ.ಹರಿಪ್ರಸಾದ್ ಅವರೇ ಕಾರಣ. ಕೂಡಲೇ ಕಾಂಗ್ರೆಸ್​ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಬಂಧನ ಆಗಬೇಕು ಎಂದು ಪೊಲೀಸ್​ ಆಯುಕ್ತರಿಗೆ ಆಗ್ರಹಿಸುತ್ತೇನೆ​. ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿ.ಕೆ.ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿ, ಹರಿಪ್ರಸಾದ ಹೀಗೆ ಹೇಳುತ್ತಾರೆಂದರೇ ಸರ್ಕಾರ ಏನು ಮಾಡುತ್ತಿದೆ? ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಗೋಧ್ರಾದಲ್ಲಿ ಹಿಂದೂಗಳನ್ನು ಸುಟ್ಟವರು ಮುಸ್ಲಿಂರು ಅಲ್ವಾ? ಕರ್ನಾಟಕದಲ್ಲಿಯೂ ಹಿಂದೂಗಳನ್ನೂ ಹಾಗೆ ಹೆದರಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಸಂಸದ ಸಂಗಣ್ಣ ಕರಡಿ ಪ್ರತಿಕ್ರಿಯಿಸಿ, ಕಾಂಗ್ರೆಸ್​ ಎಂಎಲ್​ಸಿ ಹರಿಪ್ರಸಾದ್​ಗೆ ಮಂಪರು ಪರೀಕ್ಷೆ ಮಾಡಿಸಬೇಕು. ಜ.22ರಂದು ಏನಾದರೂ ಘಟನೆಗಳಾದರೇ ಅದಕ್ಕೆ ಹರಿಪ್ರಸಾದ್ ಕಾರಣರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ಸಿಟಿ ರವಿ ಪ್ರತಿಕ್ರಿಯಿಸಿ, ಅನ್ಯಾಯ, ಸುಳ್ಳು, ಮೋಸ ಇದು ಧರ್ಮವಲ್ಲ. ಅದು ಧಾರ್ಮಿಕ ಕಾರ್ಯಕ್ರಮ ಅಲ್ಲ ಅಂತ ಅವರಿಗೇಕೆ ಅನ್ನಿಸಿತು. ದೇವರು ಅವಕಾಶ ನೀಡಿದಾಗ ಇವರು ಸತ್ಯ ಎತ್ತಿ ಹಿಡಿಯುವ ಕೆಲಸ ಮಾಡ್ಲಿಲ್ಲ. ಈಗ ಅವರಿಗೆ ಹೊಟ್ಟೆ ಉರಿಯಾಗುತ್ತಿದೆ. ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡೆತಡೆ ನಿವಾರಿಸಿದ್ದರೇ ಕರಸೇವೆ ಅಗತ್ಯವೇ ಇರುತ್ತಿರಲಿಲ್ಲ. ಕಾಶಿ ಕಾರಿಡಾರ್ ಅವರೇ ಮಾಡಿ ಗಂಗಾರತಿ ಮಾಡಬೇಕಿತ್ತು. ಮೋದಿ ಹಿಂದೂ ಹೃದಯ ಸಾಮ್ರಾಟ್ ಅಂತ ಕರೆಸಿಕೊಳ್ಳುತ್ತಿರಲ್ಲ ಎಂದು ಹೇಳಿದ್ದಾರೆ.

Comments (0)
Add Comment