ಬಿಜೆಪಿ ಅವಧಿಯ ‘ಸಾಮೂಹಿಕ ವಿವಾಹ’ದ ಹೆಸರು ಬದಲಾಯಿಸಿದ ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ ಹಿಂದಿನ ಸರ್ಕಾರದಲ್ಲಿದ್ದ ವಿವಿಧ ಯೋಜನೆಗಳ ಹೆಸರನ್ನು ಈ ಗಿನ ಸರ್ಕಾರ ಬದಲಾಯಿಸುತ್ತದೆ. ಅದೇ ರೀತಿ ಬಿಜೆಪಿ ಸರ್ಕಾರದ ಸಾಮೂಹಿಕ ವಿವಾಹದ ಹೆಸರನ್ನು ಬದಲಾಯಿಸಿ ಅದನ್ನು ಕರ್ನಾಟಕ ರಾಜ್ಯ ಸರ್ಕಾರವು ಇದನ್ನು ‘ಮಾಂಗಲ್ಯ ಭಾಗ್ಯ’ ಎಂಬ ಹೆಸರನ್ನು ಇಟ್ಟು ಮರುನಾಮಕರಣ ಮಾಡಿದ್ದಾರೆ.

ಸಾಮೂಹಿಕ ವಿವಾಹವನ್ನು ಮಾಡಿಸಲು ದೇವಾಲಯದಲ್ಲಿ ವೆಚ್ಚ ಭರಿಸಲು ಹಣ ಇಲ್ಲದ ಸಂದರ್ಭದಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯಿಂದ 60 ಸಾವಿರ ರೂ. ಬಳಕೆಗೆ ಅನುಮತಿಸಲಾಗಿದೆ. ನವೆಂಬರ್ 16, 19, 19, ಡಿಸೆಂಬರ್ 7, 10 ಮತ್ತು ಜನವರಿಯಲ್ಲಿ 28, 31 ರಂದು “ಮಾಂಗಲ್ಯ ಭಾಗ್ಯ” ಯೋಜನೆಯ ಸಾಮೂಹಿಕ ವಿವಾಹ ನಡೆಯಲಿದೆ.

ನವೆಂಬರ್‌ನಿಂದ ಜನವರಿಯವರೆಗೆ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ನಿಗದಿತ ದಿನಕ್ಕೆ ಸಾಮೂಹಿಕ ಸರಳ ವಿವಾಹ ಜರುಗುತ್ತದೆ. ಆಯಾಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಜರಾಯಿ ಇಲಾಖೆಯ ದೇಗುಲಗಳಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್ ಸರ್ಕಾರ ಮಾಹಿತಿ ನೀಡಿದೆ.

Comments (0)
Add Comment