ಬಿಜೆಪಿ ಸರ್ಕಾರ ಬಂದ ಮೇಲೆ ಈಡಿ/ಸಿಬಿಐಗಳನ್ನು ಕೈಗೊಂಬೆಯಾಗಿ ಆಗಿವೆ: ಜಗದೀಶ್

 

ಚಿತ್ರದುರ್ಗ : ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಈಡಿ/ಸಿಬಿಐಗಳನ್ನು ಕೈಗೊಂಬೆಯಾಗಿ ಮಾಡಿಕೊಂಡಿದೆ.. ವಿರೋಧ ಪಕ್ಷಗಳನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂದು ಆಮ್ ಅದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಜಗದೀಶ್ ಆರೋಪಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ನಾಯಕರಾದ ಅರವಿಂದ್ ಕೇಜ್ರಿವಾಲ್ ರವರು ಅಂಬೇಡ್ಕರ್ ಮಹಾತ್ಮ ಗಾಂಧಿಯವರ ಚಿಂತನೆಯನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ ಅಂತವರನ್ನು ಬಿಜೆಪಿ ಪಕ್ಷ ತುಳಿಯುತ್ತಿದೆ. ಕೇಜ್ರಿವಾಲ್ ರವರನ್ನು ಈಡಿಯವರು ಬಂಧಿಸಿದ್ದಾರೆ. ಇದು ಸಂವಿಧಾನದ ಕಗ್ಗೊಲೆ. ಈಡಿಯನ್ನು ಉಪಯೋಗಿಸಿಕೊಂಡು ನಮ್ಮ ನಾಯಕರಾದ ಕ್ರೇಜಿವಾಲ್ ರವರನ್ನು ಅರೆಸ್ಟ್ ಮಾಡಿದ್ದಾರೆ.. ಇದು ಅಮ್ ಅದ್ಮಿ ಪಕ್ಷವನ್ನು ನಿರ್ನಾಮ ಮಾಡಲು ಬಿಜೆಪಿ ಸರ್ಕಾರ ಮಾಡಿರುವ ಕುತಂತ್ರ ಎಂದು ದೂರಿದರು.

ಬಿಜೆಪಿಯವರು ತಮಗೆ ಹೇಗೆ ಬೇಕೋ ಹಾಗೆ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಾರೆ.ಬ್ಲಾಕ್ ಮನಿಯನ್ನು ಅಕೌಂಟ್ ಮನಿಯಾಗಿ ಪರಿವರ್ತನೆ ಮಾಡಿ ಚುನಾವಣೆಗೆ ಬಳಸುತ್ತಿದ್ದಾರೆ. ಬಾಂಡ್ ಕೊಳ್ಳುವಿಕೆ ಕಾನೂನು ಬಾಹಿರ. ಇದು ದಾವುತ್ ಇಬ್ರಾಹಿಂ ರೀತಿಯಲ್ಲಿ ಹಫ್ತಾ ವಸೂಲಿ ನೀತಿ ಇದ್ದಹಾಗೆ. ಇದನ್ನು ಇಂದಿನ ಯಾವ ಸರ್ಕಾರಗಳು ಸಹ ಜಾರಿತಂದಿರಲಿಲ್ಲ. ದೇಶದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗಿರುವುದು ಬಿಜೆಪಿ ಪಕ್ಷದ ಆಡಳಿತದಲ್ಲಿ… ಈ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ. ಹಿಂದುಳಿದ ಸಮುದಾಯಗಳನ್ನು ಕೇವಲ ಮತಕ್ಕಾಗಿ ಬಿಜೆಪಿ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಬಿಜೆಪಿಯವರು ಶ್ರೀರಾಮನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಆದರೆ ಶ್ರೀ ರಾಮನ ಚಿಂತನೆಗಳನ್ನು ಅವರು ಅಳವಡಿಸಿಕೊಂಡಿಲ್ಲ. ಸರ್ಕಾರ ಸರಿದಾರಿಯಲ್ಲಿ ನಡೆಯಬೇಕಾದರೆ ವಿರೋಧ ಪಕ್ಷ ಬೇಕು. ವಿರೋಧ ಪಕ್ಷ ಇಲ್ಲದೇ ಇರುವ ಹಾಗೆ ಮಾಡುವ ಹೊನ್ನಾರ ಬಿಜೆಪಿ ಪಕ್ಷದ್ದು. ದೇಶದಲ್ಲಿ ಸಂವಿಧಾನ ಇರುವುದರಿಂದ ರಾಷ್ಟ್ರದಲ್ಲಿ ಎಲ್ಲರೂ ಸಮನಾಗಿ ಬದುಕಲು ಸಾಧ್ಯವಾಗಿದೆ.. ಅದನ್ನೇ ತಿರುಚಲು ಹೊರಟಿದ್ದಾರೆ ಎಂದು ಜಗದೀಶ್ ಆರೋಪಿಸಿ ಸೋಮವಾರದೊಳಗೆ ನಮ್ಮ ನಾಯಕರಾದ ಅರವಿಂದ ಕೇಜ್ರಿವಾಲ್ರವರ ಬಿಡುಗಡೆ ಮಾಡದಿದ್ದರೆ ಅವರ ಬಂಧನವನ್ನು ವಿರೋಧಿಸಿ ೨೫.೦೩.೨೦೨೪ ರಂದು ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಬಿಜೆಒ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲ್ರವರ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ತಮ್ಮ ಎಡಗೈನ ತೊಳಿಗೆ ಕಪ್ಪು ಪಟ್ಟಿಯನ್ನು ಧರಿಸುವುದರ ಮೂಲಕ ಕೇಜ್ರಿವಾಲ್ ರವರ ಬಂಧನವನ್ನು ಪ್ರತಿಭಟಿಸಿದರು.

ಗೋಷ್ಟಿಯಲ್ಲಿ ಜ್ಯೋತಿ, ವರಲಕ್ಷ್ಮೀ, ವಿನೋಧಮ್ಮ, ತನ್ವೀರ್, ಲತಾ,ಮ ಶಿವಮ್ಮ, ಆಕ್ಬರ್, ಹೇಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

ಬಿಜೆಪಿ ಸರ್ಕಾರ ಬಂದ ಮೇಲೆ ಈಡಿ/ಸಿಬಿಐಗಳನ್ನು ಕೈಗೊಂಬೆಯಾಗಿ ಆಗಿವೆ: ಜಗದೀಶ್
Comments (0)
Add Comment