ಬಿಲ್ಕಿಸ್ ಬಾನು ಕೇಸ್: 11 ಅಪರಾಧಿಗಳ ಬಿಡುಗಡೆಯ ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸಿದ ಸುಪ್ರೀಂ

ನವದೆಹಲಿ: ಬಿಲ್ಕಿ ಸ್ ಬಾನು ಸಾಮೂಹಿಕ ಅತ್ಯಾ ಚಾರ ಪ್ರ ಕರಣದಲ್ಲಿ 11 ಅಪರಾಧಿಗಳನ್ನು ಗುಜರಾತ್ ಸರ್ಕಾರದ ವಿನಾಯತಿ ಅವಧಿ ಪೂರ್ವ ಬಿಡುಗಡೆ ಮಾಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 2002ರ ಗುಜರಾತ್ ಗಲಭೆಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿ ತನ್ನ ಮಗು ಮತ್ತು ಕುಟುಂಬದವರನ್ನು ಕೊಂದ 11 ಅಪರಾಧಿಗಳನ್ನು ಬಿಡುಗಡೆ ಆದೇಶವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿರುವ ಅರ್ಜಿಯು ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಅರ್ಜಿ ವಿಚಾರಣೆ ಮುಂದುವರಿಯುವುದು ಎಂದು ಸುಪ್ರೀಂ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಗರತಾನಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ತೀರ್ಪು ಪ್ರಕಟಿಸಿತು ಮತ್ತು 11 ಅಪರಾಧಿಗಳ ಶೀಘ್ರ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿದ ಅರ್ಜಿಯು ಮಾನ್ಯವಾಗಿದೆ ಎಂದು ಹೇಳಿದರು.

ಗುಜರಾತ್ ಸರ್ಕಾರವು 11 ಅಪರಾಧಿಗಳ ಬಿಡುಗಡೆ ಮಾಡಲು ಸಮರ್ಥವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಪರಾಧಿಗಳ ಶೀಘ್ರ ಬಿಡುಗಡೆಯ ಕುರಿತು ಆದೇಶವನ್ನು ಹೊರಡಿಸಲು ಗುಜರಾತ್ ಸರ್ಕಾರಕ್ಕೆ ಅಧಿಕಾರವಿಲ್ಲ
ಏಕೆಂದರೆ ಅಂತಹ ಆದೇಶಗಳನ್ನು ಜಾರಿಗೊಳಿಸಲು ಸೂಕ್ತವಾದ ಸರ್ಕಾರವು ಮಹಾರಾಷ್ಟ್ರ, ವಿಚಾರಣೆ ನಡೆದಿದ್ದು, ಗುಜರಾತ್ ನಲ್ಲಿ ಅಲ್ಲ.

‘2002ರ ಗುಜರಾತ್ ದಂಗೆ ವೇಳೆ 21 ವರ್ಷದವರಾಗಿದ್ದ ಹಾಗೂ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್‌ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಮೂರು ವರ್ಷದ ಪುತ್ರಿ ಸಹಿತ ಏಳು ಕುಟುಂಬ ಸದಸ್ಯರನ್ನೂ ಹತ್ಯೆಗೈಯ್ಯಲಾಗಿತ್ತು. ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

Comments (0)
Add Comment