ಬೀಟ್ ರೋಟ್ ಹಲ್ವಾ ಎಂದಾದರು ತಿಂದಿದ್ದೀರ.! ಹಾಗಾದ್ರೆ ಹೀಗೆ ಮಾಡ್ರಿ.!

 

ಬೀಟ್ ರೂಟ್ ಹಲ್ವಾ ಯಾವತ್ತಾದ್ರೂ ಟೇಸ್ಟ್ ಮಾಡಿದ್ದೀರಾ? ಆರೋಗ್ಯಕ್ಕೂ ಉತ್ತಮವಾಗಿರೋ ಈ ಹಲ್ವ ತಿನ್ನಲು ಸಹ ಬಲು ರುಚಿ. ಅದನ್ನು ತಯಾರಿಸುವುದು ಕೂಡ ಬಹಳ ಸುಲಭ.

ಬೇಕಾಗುವ ಸಾಮಗ್ರಿ : 2 ಚಮಚ ತುಪ್ಪ, ಸಣ್ಣಗೆ ತುರಿದ 4 ಬೀಟ್ ರೂಟ್, 1 ಕಪ್ ಹಾಲು, ಕಾಲು ಕಪ್ ಸಕ್ಕರೆ, ಸ್ವಲ್ಪ ಖೋವಾ, ಕತ್ತರಿಸಿದ ಗೋಡಂಬಿ ನಾಲ್ಕಾರು, ಏಲಕ್ಕಿ ಪುಡಿ.

ಮಾಡುವ ವಿಧಾನ : ದೊಡ್ಡ ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಲು ಇಡಿ. ಅದು ಬಿಸಿಯಾಗುತ್ತಿದ್ದಂತೆ ತುರಿದ ಬೀಟ್ ರೂಟ್ ಹಾಕಿ ಮಿಕ್ಸ್ ಮಾಡಿ. 2-4 ನಿಮಿಷಗಳವರೆಗೆ ಹುರಿಯಿರಿ. ನಂತರ ಅದಕ್ಕೆ ಹಾಲು ಸೇರಿಸಿ ತಿರುವಿ. ಸುಮಾರು 20 ನಿಮಿಷಗಳವರೆಗೆ ಮುಚ್ಚಿ ಬೇಯಿಸಿ.

ಆಗಾಗ ಸೌಟಿನಲ್ಲಿ ಕೈಯ್ಯಾಡಿಸುತ್ತಿರಿ. ಸಂಪೂರ್ಣವಾಗಿ ನೀರು ಆರಿದ ಬಳಿಕ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 5 ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ತುಪ್ಪ ಹಲ್ವದಿಂದ ಬೇರ್ಪಟ್ಟ ಬಳಿಕ ಅದಕ್ಕೆ ಖೋವಾ ಹಾಕಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿದ ಬಳಿಕ ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿದ್ರೆ ಸಿಹಿಯಾದ ಬೀಟ್ ರೂಟ್ ಹಲ್ವ ರೆಡಿ.

ಬೀಟ್ ರೋಟ್ ಹಲ್ವಾ ಎಂದಾದರು ತಿಂದಿದ್ದೀರ.! ಹಾಗಾದ್ರೆ ಹೀಗೆ ಮಾಡ್ರಿ.!
Comments (0)
Add Comment