ಬೀದರ್ ಜಿಲ್ಲೆಯಲ್ಲಿ 2 ಬಾರಿ ಭೂಕಂಪನ!

 

ಬೀದರ್: ಉತ್ತರ ಕರ್ನಾಟಕದ ಗಡಿ ಜಿಲ್ಲೆ ಬೀದರ್‌ನಲ್ಲಿ ಇಂದು ಲಘು ಭೂಕಂಪನ ಸಂಭವಿಸಿದೆ. 1.9 ಮತ್ತು 2.1 ತೀವ್ರತೆಯಲ್ಲಿ ಎರಡು ಬಾರಿ ಭೂಕಂಪನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಭೂಕಂಪನ ವಿಭಾಗವು ಮಾಹಿತಿ ನೀಡಿದೆ.

ಜಿಲ್ಲೆಯ ಮದರಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಡ್ಡನಕೇರಾ ಗ್ರಾಮದಲ್ಲಿ ಮೊದಲ ಸಲ 1.9 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಬಳಿಕ ಅದೇ ಸ್ಥಳದಲ್ಲಿ 2.1 ತೀವ್ರತೆಯಲ್ಲಿ ಮತ್ತೆ ಭೂಕಂಪನವಾಗಿದೆ ಎಂದು ತಿಳಿದುಬಂದಿದೆ.

ಬೀದರ್ ಜಿಲ್ಲೆಯಲ್ಲಿ 2 ಬಾರಿ ಭೂಕಂಪನ!
Comments (0)
Add Comment