ಬೂಕರ್ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಖ್ಯಾತ ಸಂಗೀತಗಾರ ನಿತಿನ್ ಸಾಹ್ನಿ ನೇಮಕ

ಲಂಡನ್: 2024ನೇ ಸಾಲಿನ ಬೂಕರ್ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಖ್ಯಾತ ಸಂಗೀತಗಾರ, ಭಾರತೀಯ ಬ್ರಿಟನ್ ಪ್ರಜೆ ನಿತಿನ್ ಸಾಹ್ನಿ ಅವರನ್ನು ನೇಮಕ ಮಾಡಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ‘ವಿಶ್ವದ ಪ್ರತಿಷ್ಠಿತ ಪ್ರಶಸ್ತಿಯ ಮುಂದಿನ ವರ್ಷದ ವಿಜೇತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸ್ಥಾನ ದೊರೆತಿರುವುದು ನನಗೆ ಗೌರವದ ಸಂಗತಿ’ ಎಂದು ತಿಳಿಸಿದ್ದಾರೆ.

59 ವರ್ಷದ ನಿತಿನ್ ಅವರು ಬೂಕರ್ ಪ್ರಶಸ್ತಿ ಗಳಿಸಿದ ಸಲ್ಮಾನ್ ರಶ್ದಿ ಅವರ ‘ಮಿಡ್ ನೈಟ್ಸ್ ಚಿಲ್ಡ್ರನ್’ ಎಂಬ ಕೃತಿಯನ್ನು ರಂಗಭೂಮಿಗೆ ಅಳವಡಿಸಲಾಗಿತ್ತು. ಆಗ ಇದಕ್ಕೆ ನಿತಿನ್ ಅವರು ಸಂಗೀತ ಸಂಯೋಜನೆ ಮಾಡಿ ಜನಮನ್ನಣೆ ಗಳಿಸಿದ್ದರು.

ಕಾದಂಬರಿಗಾರ್ತಿ ಝಂಪಾ ಲಹರಿ ಅವರ ‘ದಿ ನೇಮ್ ಸೇಕ್’ ಕೃತಿ ಆಧಾರಿತ ಚಲನಚಿತ್ರ ಹಾಗೂ ನಿರ್ದೇಶಕ ಶೇಖರ್ ಕಪೂರ್ ಅವರ ‘ವಾಟ್ಸ್ ಲವ್ ಗಾಟ್ ಟು ಡು ವಿತ್ ಇಟ್’ ಹೀಗೆ 70 ಕ್ಕೂ ಅಧಿಕ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

 

Comments (0)
Add Comment