ಬೆಂಗಳೂರಿನಿಂದ ರಾಮ ಜನ್ಮಭೂಮಿ ಅಯೋಧ್ಯಯತ್ತ ಹೊರಟ ಅಳಿಲಿನ‌ ಪುತ್ಥಳಿ

ಬೆಂಗಳೂರು : ಬೆಂಗಳೂರಿನಿಂದ ರಾಮ ಜನ್ಮಭೂಮಿ ಅಯೋಧ್ಯಯತ್ತ ಅಳಿಲಿನ‌ ಪುತ್ಥಳಿ ಹೊರಟಿದೆ. ಪ್ರಸಿದ್ಧಿ ಇಂಜಿನಿಯರ್ಸ್ ಕಂಪೆನಿಯ ಮಾಲೀಕ ಸಿ.ಪ್ರಕಾಶ್ ರಿಂದ ಅಳಿಲು ಸೇವೆ ಸಲ್ಲಿಸಲಾಗಿದೆ. ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ, 15 ಅಡಿ ಎತ್ತರದ ಅಳಿಲಿನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಸುಮಾರು 7.5 ಅಡಿ ಅಗಲ ವಿಸ್ತೀರ್ಣ ಬೃಹದಾಕಾರದ ಅಳಿಲು ಪುತ್ಥಳಿ ಇದೆ. ಅಯೋಧ್ಯೆಯ ರೈಲ್ವೆ ನಿಲ್ದಾಣ ಆವರಣದ ಮಧ್ಯ ಭಾಗದಲ್ಲಿ ಜನವರಿ 12ರಂದು ಈ ಪುತ್ಥಳಿ ಅನಾವರಣಗೊಳ್ಳಲಿದೆ. ನಿನ್ನೆ ಅಳಿಲು ಪುತ್ಥಳಿ ಹೊತ್ತು ಟ್ರಕ್‌ನಲ್ಲಿ ಅಯೋಧ್ಯೆಯತ್ತ ತೆರಳಿದೆ. 11 ನೇ ತಾರೀಖು ಅಯೋಧ್ಯೆಗೆ ತಲುಪಲಿದ್ದು, 12 ರಂದು ಅಯೋಧ್ಯೆ ರೈಲ್ವೆ ನಿಲ್ದಾಣದಲ್ಲಿ ಅನಾವರಣಗೊಳ್ಳಲಿದೆ.

Comments (0)
Add Comment