ಬೆಂಗಳೂರಿನ 7ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

ಬೆಂಗಳೂರು: ಪ್ರಮುಖ ಏಳು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಆತಂಕದ ಮನೆ ಮಾಡಿದೆ. ಹೌದು ಬಸವೇಶ್ವರ ನಗರದ ನ್ಯಾಷಲ್ ಸ್ಕೂಲ್, ವಿದ್ಯಾಶಿಲ್ಪ ಸೇರಿದಂತೆ ಒಟ್ಟ 7ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಯಲಹಂಕದದಲ್ಲಿರುವ ಖಾಸಗಿ ಶಾಲೆ ಒಂದಕ್ಕೂ ಬೆದರಿಕೆಯ ಮೇಲ್ ಬಂದಿದೆ. ಇಂದು ಬೆಳಗ್ಗೆ ಮೇಲ್ ಓಪನ್ ಮಾಡಿದಾಗ ಬೆದರಿಕೆ ಹಾಕಿರೋದು ಕಂಡು ಬಂದಿದೆ. ಮೇಲ್ ನೋಡಿದ ಶಾಲಾ ಆಡಳಿತ ಮಂಡಳಿ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Comments (0)
Add Comment