ಬೆಂಗಳೂರು: ಆಸ್ತಿ ತೆರಿಗೆ 6.5%ರಷ್ಟು ಹೆಚ್ಚಳ-ಏಪ್ರಿಲ್‌ನಿಂದಲೇ ಜಾರಿ

ಬೆಂಗಳೂರು: ಏಪ್ರಿಲ್ ಒಂದರಿಂದ ಬೆಂಗಳೂರು ಮಹಾ ನಗರ ಪಾಲಿಕೆ ಹೊಸ ಆಸ್ತಿ ತೆರಿಗೆ ಜಾರಿಗೆ ತರಲಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ವ್ಯವಸ್ಥೆಗಾಗಿ ನಂಬಿಕೆ ನಕ್ಷೆ (ನಂಬಿಕೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆ), ಹೊಸ ಆಸ್ತಿ ತೆರಿಗೆ ವ್ಯವಸ್ಥೆ ಹಾಗೂ ಖಾತಾ ವ್ಯವಸ್ಥೆ ನಾಗರಿಕ ಸ್ವಯಂ ಘೋಷಣೆ ಆಧಾರಿತ ತಾತ್ಕಾಲಿಕ ಆಸ್ತಿ ತೆರಿಗೆ ಸಂಖ್ಯೆ ನಿಯೋಜನೆ ಮತ್ತು ಬಿಬಿಎಂಪಿ ಖಾತಾ ವಿತರಣೆ ಯೋಜನೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಬಳಿಕ, ಈ ವಿಚಾರ ಕುರಿತು ಮಾಹಿತಿ ನೀಡಿದ ಡಿಸಿಎಂ, ಎಂಟು ವರ್ಷಗಳ ಬಳಿಕ ಆಸ್ತಿ ತೆರಿಗೆ ಹೆಚ್ಚಳವಾಗುತ್ತಿದೆ, ಹೊಸ ಆಸ್ತಿ ತೆರಿಗೆ ವ್ಯವಸ್ಥೆಯಾಡಿ ಎಲ್ಲಾ ಮಾದರಿಗಳ ಆಸ್ತಿ ತೆರಿಗೆಗಳನ್ನು ಕನಿಷ್ಠ 5.3 ಮತ್ತು ಗರಿಷ್ಠ 8.2ರವರೆಗೂ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು. ವಸತಿ ಮತ್ತು ವಸತಿಯೇತರ ಕಟ್ಟಡಗಳು ನಿರ್ಮಾಣಗೊಂಡು ಎಷ್ಟು ವರ್ಷಗಳಾಗಿವೆ ಎಂಬುದರ ಆಧಾರದ ಮೇಲೆ ಆಸ್ತಿ ತೆರಿಗೆ ವಿಧಿಸಲಾಗುತ್ತದೆ.

Comments (0)
Add Comment