ಬೆಂಗಳೂರು ಪೊಲೀಸರಿಗೆ ಬಾಡಿ ವೋರ್ನ್ ಕ್ಯಾಮೆರಾ ಕಡ್ಡಾಯ: ಡಿಜಿ,ಐಜಿ ಆದೇಶ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ವಿರುದ್ದ ಕೇಳಿ ಬರುತ್ತಿರುವ ಭ್ರಷ್ಟಾಚಾರ, ಸುಳ್ಳು ಕೇಸ್ ದಾಖಲು, ಸುಲಿಗೆ, ಅನುಚಿತ ವರ್ತನೆ ಸೇರಿ ಹಲವು ದೂರುಗಳನ್ನು ತಡೆಯಲು ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಬಾಡಿವೋರ್ನ್ ಕ್ಯಾಮರಾ ಧರಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.

ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಸಂದರ್ಭ, ಮುಖ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಪೊಲೀಸರು ಬಂಧಿಸುವಾಗ ಮತ್ತು ವಿಚಾರಣೆ ವೇಳೆ ಕ್ಯಾಮರಾಗಳನ್ನು ಧರಿಸಲು ಡಿಜಿಪಿ ಸೂಚಿಸಿದ್ದು, ಅವುಗಳ ಬಳಕೆ ಹೇಗಿರಬೇಕು? ಜವಾಬ್ದಾರಿ ನಿರ್ವಹಣೆ ಹೇಗೆ? ಸೇರಿ ಇನ್ನಿತರ ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಇದನ್ನು ಪಾಲನೆ ಮಾಡುವಂತೆ ರಾಜ್ಯದ ಎಲ್ಲ ಕಮಿಷನರ್​ಗಳು, ಐಜಿಪಿ, ಡಿಸಿಪಿಗಳು ಸೇರಿ ಎಲ್ಲ ಘಟಕದ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ

ಇನ್ನು ಈ ಯೋಜನೆಯನ್ನು ಜಾರಿಗೊಳಿಸುವಂತೆ ಹೈಕೋರ್ಟ್ 2022ರ ಜೂ.10ರಂದು ಆದೇಶ ಹೊರಡಿಸಿತ್ತು. ಆದರೆ ಇದೀಗಾ ಬೆಂಗಳೂರು ಸಂಚಾರ ಹಾಗೂ ಹೊಯ್ಸಳ ಪೊಲೀಸರಿಗಷ್ಟೇ ಸೀಮಿತವಾಗಿದ್ದ ಬಾಡಿವೋರ್ನ್ ಕ್ಯಾಮರಾ ಧರಿಸುವ ಯೋಜನೆಯನ್ನು ಪೊಲೀಸ್ ಇಲಾಖೆ ಈಗ ರಾಜ್ಯದ ಎಲ್ಲ ಪೊಲೀಸರಿಗೆ ವಿಸ್ತರಿಸಿ
ಅನುಷ್ಠಾನಕ್ಕೆ ತರುತ್ತಿದೆ.

Comments (0)
Add Comment