ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಗಂಡನ ಬರ್ಬರ ಹತ್ಯೆ: ಆರೋಪಿಗಳ ಬಂಧನ

ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನೇ ಕೊಲೆ ಮಾಡಿಸಿದ ಆರೋಪಿತೆಯನ್ನು ಆಕೆಯ ಪ್ರಿಯಕರ ಮತ್ತು ಕೊಲೆ ಮಾಡಲು ಸಹಕರಿಸಿದ ಆರೋಪಿಗಳ ಬಂಧನವಾಗಿದೆ.

ಗಟ್ಟಿಗೆರೆ ಪಾಳ್ಯದಿಂದ ವರಾಹಸಂದಕ್ಕೆ ಹೋಗುವ ನೈಸ್ ರಸ್ತೆ ಬಿಡ್ಜ್ ಬಳಿ ಅಪರಿಚಿತ ಗಂಡಸಿನ ಶವವಿರುತ್ತೆ ಕೂಡಲೆ ಹೊಯ್ಸಳ ವಾಹನವು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 27-30 ವರ್ಷ ವಯಸ್ಸಿನ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಆತನ ಮುಖ, ತಲೆ, ಕೈಗಳಿಗೆ ಯಾವುದೋ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿರುವುದು ಕಂಡುಬಂದಿರುತ್ತದೆ. ನಂತರ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯಲ್ಲಿ ಮೃತನ ಹೆಸರು ಆರುಣ್ ಕುಮಾರ್ ಬಿನ್ ರಾಮಚಂದ್ರ 34 ವರ್ಷ, ನಣ್ಣೂರು ಗ್ರಾಮ, ಚನ್ನಪಟ್ಟಣ, ರಾಮನಗರ ಜಿಲ್ಲೆ ಎಂದು ತಿಳಿದುಬಂದಿರುತ್ತದೆ.

ತನಿಖಾಧಿಕಾರಿಯವರು ತನಿಖೆಯನ್ನು ಮುಂದುವರಿಸಿ 08:01/07/2023 ರಂದು ಪ್ರಕರಣದ ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ, ಮೃತನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದು ಮೃತನು ಉತ್ತರಹಳ್ಳಿ ರಸ್ತೆ, ಜೆ.ಎಸ್.ಎಸ್ ಕಾಲೇಜ್ ಪಕ್ಕದಲ್ಲಿ ಗೌಡ್ರು ಬೀಗರ ಊಟ ಎಂಬ ಹೋಟೆಲ್ ನಡೆಸುತ್ತಿದ್ದು, ಸದರಿ ಹೋಟೆಲ್‌ಗೆ ವಾಟರ್ ಸಪ್ಪೆ ಮಾಡುತ್ತಿದ್ದ ಆರೋಪಿಯು ಮೃತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ತಿಳಿದು ಬಂದಿರುತ್ತದೆ.ಅಲ್ಲದೇ ಮೃತನು ಆರೋಪಿಯಿಂದ ಹೊಟೇಲ್  ಬಿಸಿನೆಸ್‌ಗೆಂದು ಹಣವನ್ನು ಸಾಲವಾಗಿ ಪಡೆದಿದ್ದು ಮತ್ತು ಆತನ ಮೂಲಕ ಬೇರೆ ಬೇರೆಯವರ ಬಳಿ ಫೈನಾನ್ಸ್‌ಗೆ ಹಣ ಪಡೆದುಕೊಂಡು ಹೋಟೆಲ್ ಲಾಸ್ ಆಗಿದ್ದರಿಂದ ಫೈನಾನ್ಸ್ ರವರಿಗೆ ಹಣ ಕಟ್ಟಲಾಗದೆ ಹೊಟೇಲ್ ಮುಚ್ಚಿರುತ್ತಾನೆ.

ಪ್ರಕರಣದ ಮೃತನು ಆರೋಪಿಗೆ ಮತ್ತು ಮೃತನ ಪತ್ನಿಗೆ ಅನೈತಿಕ ಸಂಬಂಧ ಇರುವ ವಿಚಾರದ ಬಗ್ಗೆ ತಿಳಿದು  ಎಚ್ಚರಿಕೆ ಕೊಟ್ಟಿದ್ದರೂ ಸಹ ಅವರಿಬ್ಬರ ಅಕ್ರಮ ಸಂಬಂಧ ಮುಂದುವರಿಸಿರುತ್ತಾರೆ, ಮೃತನು ತನ್ನ ಪತ್ನಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಹಲವಾರು ಬಾರಿ ಬೈದು, ಹೊಡೆಯುತ್ತಿದ್ದ ವಿಷಯವನ್ನು ಮೃತನ ಪತ್ನಿ ಆರೋಪಿಗೆ ತಿಳಿಸಿದ್ದು, ನಂತರ ಇಬ್ಬರು ಕೂಡಿ ಆರುಣ್‌ ಕುಮಾರ್ ಇದ್ದರೆ ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲವೆಂದು ಇತರ ಸಹಚರರೊಂದಿಗೆ ಸೇರಿ ದಿನಾಂಕ:28/06/2023 ರಂದು ರಾತ್ರಿ ಮೃತನನ್ನು ಮೇಲೆ ತಿಳಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ.

ಪ್ರಕರಣದ ಯಶಸ್ವಿ ಕಾರ್ಯಾಚರಣೆಯನ್ನು ಬೆಂಗಳೂರು ನಗರ ದಕ್ಷಿಣ ವಿಭಾಗದ  ಉಪ ಪೊಲೀಸ್ ಕಮೀಷನರ್  ಪಿ.ಕೃಷ್ಣಕಾಂತ್‌, ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್ ಕಮಿಷನರ್  ಎನ್.ಪವನ್ ರವರ ನೇತೃತ್ವದಲ್ಲಿ, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಆರ್.ಮಂಜುನಾಥ ಹಾಗೂ ಸಿಬ್ಬಂದಿಯವರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Comments (0)
Add Comment