ಬೆಂಗಳೂರು: ಫೋನ್ ಕಳೆದೋಯ್ತಾ? ಕಂಪ್ಲೇಂಟ್ ಇಲ್ಲದೇ ಫೋನ್ ನಿಮ್ಮ ಕೈ ಸೇರುತ್ತೆ

ಬೆಂಗಳೂರು: ಮೊಬೈಲ್ ಫೋನ್ ಕಳೆದುಹೋಗಿದೆ. ಮನೆಯಲ್ಲಿ ಇಟ್ಟಾಗ ಮಿಸ್ ಆಗಿದೆ. ಬಸ್‌ನಲ್ಲಿ ಪಿಕ್ ಪಾಕೆಟ್ ಆಗಿದೆ. ಹೀಗಂತ ನಿತ್ಯ ನೂರಾರು ದೂರುಗಳು ಕೇಳಿ ಬರ್ತಾವೆ. ಇನ್ನೂ ಇಂಥಹ ಮೊಬೈಲ್ ಕೇಸ್ ತಗೊಂಡು ಠಾಣೆಗೆ ಹೋದ್ರೆ ಮೊಬೈಲ್ ಕೇಸು ಅಂತ ಪೊಲೀಸ್ರು ಸರಿಯಾಗಿ ರೆಸ್ಪಾನ್ಸ್ ಮಾಡಲ್ಲ ಅಂತ ಸಾಕಷ್ಟು ದೂರುಗಳು ಕೇಳಿ ಬಂದಿದ್ವು.

ಇನ್ನೂ ಪೊಲೀಸ್ ಸ್ಟೇಷನ್‌ಗೆ ದೂರು ಕೊಟ್ರೆ ಅವ್ರು ಎಲ್ಲಿ ಹುಡುಕುತ್ತಾರೆ. ಸುಮ್ನೆ ಟೈಮ್ ವೇಸ್ಟ್ ಅಂತ ಅದೆಷ್ಟೋ ಜನ ಸುಮ್ಮನಾಗ್ತಿದ್ರು.‌ ಆದ್ರೆ ಇನ್ನು ಮುಂದೆ ಹಾಗಾಗಲ್ಲ. ಮೊಬೈಲ್ ಮಿಸ್ ಆದ್ರೆ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಬಗ್ಗೆ ದೂರು ನೀಡಬಹುದು. ನೀವು ಮಾಡಬೇಕಿರೋದು ಇಷ್ಟೇ ಜಸ್ಟ್ 94492 95555 ಮೊಬೈಲ್ ನಂಬರ್‌ಗೆ ಜಸ್ಟ್ ವಾಟ್ಸ್ ಆಪ್‌ನಲ್ಲಿ ಹಾಯ್ ಅಂತ ಮೆಸೇಜ್ ಕಳುಹಿಸಬೇಕು. ಈ ವ್ಯವಸ್ಥೆಗೆ ಪೊಲೀಸ್ ಇಲಾಖೆ ಈ ಸ್ಪಂದನ ಅಂತ ಹೆಸರಿಟ್ಟಿದ್ದು ಈ ಕಾರ್ಯಕ್ರಮವನ್ನ ಖುದ್ದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಇದೇ 6ನೇ ತಾರೀಖು ಚಾಲನೆ ನೀಡಿದ್ದಾರೆ. ಇನ್ನೂ ಮೇಲಿನ ಮೊಬೈಲ್ ನಂಬರ್‌ಗೆ ಮೆಸೇಜ್ ಮಾಡಿದ ಕೆಲ ಸೆಕೆಂಡ್‌ನಲ್ಲಿ ಒಂದು ಡಿಜಿಟಲ್ ಅರ್ಜಿ ಬರುತ್ತೆ.

ಇದ್ರಲ್ಲಿ ನಿಮ್ಮ ನಿಮ್ಮ ಹೆಸರು, ಮೊಬೈಲ್ ನಂಬರ್, ಐಎಂಇಐ ನಂಬರ್ ಸೇರಿದಂತೆ ಕೆಲ ಮಾಹಿತಿ ಕೇಳಲಾಗುತ್ತೆ. ಈ ಮಾಹಿತಿ ಪೂರ್ಣಗೊಳಿಸಿ ಮತ್ತೆ ಅದೇ ನಂಬರ್‌ಗೆ ಸೆಂಡ್ ಮಾಡಿದ್ರೆ ನಿಮ್ಮ ಕೆಲಸ ಮುಗೀತೂ. ಇನ್ನೇನಿದ್ರು ಪೊಲೀಸ್ರ ಕೆಲಸ ನೀವು ಮರೆತ್ರು ಪೊಲೀಸ್ರು ಮಾತ್ರ ನಿಮ್ಮ ಫೋನ್ ಮೇಲೆ ನಿಗಾ ಇಟ್ಟಿರ್ತಾರೆ. ಇನ್ನೂ ಕಾರ್ಯಕ್ರಮವನ್ನ ಈ ಹಿಂದೆ ಹಿರಿಯ ಐಪಿಎಸ್ ಅಧಿಕಾರಿ ರಮನ್ ಗುಪ್ತಾ ಹುಬ್ಬಳ್ಳಿ-ಧಾರವಾಡ ಕಮಿಷನರ್ ಆಗಿದ್ದಾಗ ಯಶಸ್ವಿಗೊಳಿಸಿದ್ರು. ಸದ್ಯ ನಗರದಲ್ಲೂ ಈ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ.

Comments (0)
Add Comment