ಬೆಂಗಳೂರು: ಸ್ಕ್ರ್ಯಾಪ್ ಬಸ್‌ನಲ್ಲಿ ನೌಕರರಿಗಾಗಿ ಕ್ಯಾಂಟಿನ್ ನಿರ್ಮಿಸಿದ ಬಿಎಂಟಿಸಿ

ಬೆಂಗಳೂರು: ಸ್ಕ್ರ್ಯಾಪ್ ಆದ ಬಿಎಂಟಿಸಿ ಬಸ್ ಕ್ಯಾಂಟೀನ್ ಆಗಿ ಪರಿವರ್ತನೆಯಾಗಿದೆ. 10,64,298 ಕಿ.ಮೀ ಓಡಾಟ ನಡೆಸಿದ್ದ ಬಿಎಂಟಿಸಿ ಲೇಲ್ಯಾಂಡ್ ಉಗ್ರಾಣದಲ್ಲಿ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿದೆ.

ಬಿಎಂಟಿಸಿ ನೌಕರರ ಅನುಕೂಲಕ್ಕಾಗಿ ಬಸ್ ಕ್ಯಾಂಟೀನ್ ವ್ಯವಸ್ಥೆ ಮಾಡಿದ್ದು, ಊಟದ ಹಾಲ್ ನಿರ್ಮಿಸಿ, ಕ್ಯಾಂಟೀನ್ ಇಲ್ಲದಂತಹ ಘಟಕ, ಬಸ್ ನಿಲ್ದಾಣಗಳಲ್ಲಿ ತಿಂಡಿ, ಊಟ ಮಾಡಲು ಈ ಬಸ್ ಉಪಯೋಗವಾಗಿದೆ. ಭೋಜನ ಬಂಡಿ ಹೆಸರಿನಲ್ಲಿ ಕ್ಯಾಂಟೀನ್ ಬಸ್ ನಿರ್ಮಾಣ ಮಾಡಿದ್ದು, ಬನ್ನಿ ಕುಳಿತು ಊಟ ಮಾಡೋಣ ಎಂಬ ಸುಂದರ ಶಿರ್ಷಿಕೆಯಡಿ ಬಸ್ ನಿರ್ಮಾಣವಾಗಿದೆ. ಬೋಜನ ಬಂಡಿ ವಿಶೇಷತೆ ನೋಡಾದಾದ್ರೆ

1. ಕುಳಿತುಕೊಳ್ಳಲು ಆಸನ ಮತ್ತು ಟೇಬಲ್ ವ್ಯವಸ್ಥೆ, ಫ್ಯಾನ್ ಗಳ ವ್ಯವಸ್ಥೆ

2. ಕೈತೊಳೆಯಲು ವಾಶ್ ಬೇಷನ್, ಕುಡಿಯುವ ನೀರಿನ ವ್ಯವಸ್ಥೆ

3. ಮೇಲ್ಛಾವಣಿಯಲ್ಲಿ ಗಾಜಿನ ಕಿಟಕಿಯಿಂದ ಗಾಳಿ/ಬೆಳಕು ಬರುವ ವ್ಯವಸ್ಥೆ

4. ಬಸ್ಸಿನ ಎರಡು ಬದಿಯಲ್ಲಿ ಗಾಳಿ ಹಾಗೂ ಬೆಳಕು ಬರುವ ವ್ಯವಸ್ಥೆ

Comments (0)
Add Comment