ಬೆಂಗಳೂರು: ಸ್ವಿಮ್ಮಿಂಗ್ ಪೂಲ್‌ಗಳಿಗೆ ಕುಡಿಯುವ ನೀರು ಬಳಸಿದರೆ 5,000 ದಂಡ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಕೊರತೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿ ಮತ್ತೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಗರದ ಈಜುಕೊಳಗಳಿಗೆ ಕುಡಿಯುವ ನೀರು ಬಳಸಬಾರದು ಎಂದು ಜಲಮಂಡಳಿ ಆದೇಶ ಹೊರಡಿಸಿದೆ. ವಾಹನ ಸ್ವಚ್ಛತೆ ಹಾಗೂ ಕಟ್ಟಡಗಳಿಗೆ, ಗಾರ್ಡನ್‌ಗಳಿಗೆ ಹೀಗೆ ಇನ್ನೂ ಮುಂತಾದ ಚಟುವಟಿಕೆಗೆ ನೀರು ಬಳಸುವುದು ನಿಷೇಧ ಮಾಡಲಾಗಿತ್ತು.

ಆದರೂ ಸಹ ದಿನೇ ದಿನೇ ಕುಡಿಯುವ ನೀರಿನ ಅಭಾವ ಉಂಟಾಗುತ್ತಿರುವ ಹಿನ್ನೆಲೆ ಜಲಮಂಡಳಿ ದಿಟ್ಟ ಹೆಜ್ಜೆ ಇಟ್ಟಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಜಲಮಂಡಳಿ ಕಾಯ್ದೆ 1964 ಕಾಲಂ 109ರ ಅನ್ವಯದಂತೆ ರೂಪಾಯಿ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ ಮತ್ತೆ ಮತ್ತೆ ಆದೇಶ ಉಲ್ಲಂಘನೆ ಮಾಡಿದ್ರೆ 5000 ಜೊತೆಗೆ 500 ಹೆಚ್ಚುವರಿ ತಂಡ ಪಾವತಿಸಬೇಕಾಗುತ್ತದೆ. ಈ ರೀತಿ ನೀರು ಪೋಲಾಗದಂತೆ ಜಲಮಂಡಳಿ ಎಚ್ಚರಿಕೆ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಇನ್ನು ಸಾರ್ವಜನಿಕರಿಗೆ ಏನಾದರೂ ಮೇಲ್ಕಂಡ ನಿಷೇಧಗಳು ಕಂಡುಬಂದಲ್ಲಿ ಕೂಡಲೇ ಬೆಂಗಳೂರು ಜಲಮಂಡಳಿಯ ಕಾಲ್ ಸೆಂಟರ್‌ಗೆ ಕರೆ ಮಾಡಿ ತಿಳಿಸಬಹುದು. ಜಲ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ 1916.

Comments (0)
Add Comment