ಬೆಳಗಾವಿ : ಸರ್ಕಾರ ಇನ್ನೂ ಟೇಕ್ ಆಪ್ ಆಗಿಲ್ಲ – ವಿಪಕ್ಷ ನಾಯಕ ಆರ್ ಅಶೋಕ ವಾಗ್ದಾಳಿ

ಬೆಳಗಾವಿ : ರಾಜ್ಯ ಸರ್ಕಾರ ಬರ ಪರಿಹಾರದಲ್ಲಿ ಜನರಿಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ, ಈ ಸರ್ಕಾರ ಇನ್ನೂ ಟೆಕ್ ಆಫ್ ಆಗಿಲ್ಲ ಅಂತಾ ವಿಪಕ್ಷ ನಾಯಕ ಆರ್. ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸುವರ್ಣ ಸೌಧದ ಅಧಿವೇಶನಕ್ಕೆ ತೆರಳುವ ಮುನ್ನ ಮಾತನಾಡಿ, ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ್ರು. ಆದರೆ, ರೈತರ ಹೆಸರಿನ ಮೇಲೆ ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ನಮ್ಮ ದುಡ್ಡು ತೆಗೆದುಕೊಂಡು ಹೋಗಿ ಅಲ್ಲಿ ಜಾಹೀರಾತು ನೀಡ್ತಿದ್ದಾರೆ. ಯಾರದ್ದೋ ದುಡ್ಡು ತೆಲಂಗಾಣದಲ್ಲಿ ಜಾತ್ರೆ ಮಾಡ್ತಿದ್ದಾರೆ ಅಂತಾ ಕಿಡಿ ಕಾರಿದರು. ನಾವು ಮತ್ತು ಜೆಡಿಎಸ್ ಅಧಿವೇಶನದಲ್ಲಿ ಜಂಟಿಯಾಗಿ ಹೋರಾಟ ಮಾಡ್ತೇವಿ, ನಾವೀಗ 85 ಶಾಸಕರಿದ್ದು ಒಟ್ಟಾಗಿ ಹೋರಾಟ ಮಾಡುತ್ತೇವೆ. ಸರ್ಕಾರ ಮೋಜು ಮಸ್ತಿ ಸುತ್ತುವುದನ್ನ ಮಾಡ್ತಿದೆ ಎಂದು ಆರೋಪಿಸಿದರು. ಇದೊಂದು ಕಳಪೆ ಸರ್ಕಾರ, ಅರವತ್ತು ಸ್ಕ್ಯಾಂಡಲ್ ನಡೆದಿದೆ. ವರ್ಗಾವಣೆ ದಂಧೆ, ಹಲೋ ಅಪ್ಪ ಪ್ರಕರಣ ನಡೆದಿವೆ ಎಂದು ಆರೋಪ ಮಾಡಿದರು. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಚರ್ಚೆ ಆಗುತ್ತದೆ. ನೀರಾವರಿ ಯೋಜನೆ, ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಮಾಡಬೇಕು. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಬಗ್ಗೆ ಚರ್ಚೆ ಮಾಡಬೇಕು ಅಂತಾ ಆರ್. ಅಶೋಕ ಹೇಳಿದರು.

Comments (0)
Add Comment