ಬೆಳೆ ಹಾನಿ ಪರಿಹಾರ ಜಮಾ ಆಗಿರೋದನ್ನು ಕಾಲ್ ಮಾಡಿ ಕೇಳಲು ಸಂಖ್ಯೆ ಬಿಡುಗಡೆ..!

ಬೆಳೆ ಹಾನಿ ಪರಿಹಾರ ಜಮೆ ಆಗಿರುವ ಕುರಿತು ಸಾಕಷ್ಟು ಜನರಿಗೆ ಗೊಂದಲ ಇದ್ದು ಇನ್ನೂ ನಿಖರವಾಗಿ ಯಾರ ಖಾತೆಗೆ ಪರಿಹಾರ ಹಣ ಬಂದಿದೆ ಮತ್ತು ಯಾರ ಖಾತೆಗೆ ಹಣ ಬಂದಿಲ್ಲ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಅದಕ್ಕಾಗಿ ಕೆಲವೊಂದು ಜಿಲ್ಲೆಗಳು ತಮ್ಮ ತಮ್ಮ ಜಿಲ್ಲಾಧಿಕಾರಿಗಳ ಸಹಾಯವಾಣಿ ಸಂಖ್ಯೆಗಳನ್ನು ಕೊಟ್ಟಿದೆ ಇದರ ಮೂಲಕ ಕರೆ ಮಾಡುವ ಮೂಲಕ ನೀವು ನಿಮ್ಮ ಖಾತೆಗೆ ಹಣ ಬಂದಿರುವುದು ಅಥವಾ ಬಂದಿಲ್ಲದೆ ಇರುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳೆ ನಷ್ಟ ಪರಿಹಾರ ಸಹಾಯವಾಣಿ ಕೇಂದ್ರ ಆರಂಭ ಮಡಿಕೇರಿ: ಕೊಡಗು ಜಿಲ್ಲೆಯ 5 ತಾಲೂಕನ್ನು ಬರಪೀಡಿತ ಪ್ರದೇಶವೆಂದು ಪ್ರಕಟಿಸಿರುವ ಹಿನ್ನೆಲೆ, ಬೆಳೆ ನಷ್ಟವಾಗಿರುವ ಕೃಷಿಕರಿಗೆ ಫೂಟ್ಸ್ ಆಪ್ ನಡಿ ನೋಂದಣಿ ಆಗಿರುವ ರೈತರಿಗೆ ಸರ್ಕಾರದ ಬೆಳೆ ನಷ್ಟ ಪರಿಹಾರವನ್ನು ನೇರವಾಗಿ ಪಾವತಿ ಮಾಡಿದ್ದು, ಈ ಸಂಬಂಧ ತೊಂದರೆ ಇದ್ದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಆರಂಭಿಸಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ ಕೇಂದ್ರ ಸಂಖ್ಯೆ 08272-221077, ಮಡಿಕೇರಿ ತಾಲೂಕು ಕಚೇರಿ 08272-228396, ಕುಶಾಲನಗರ ತಾಲೂಕು ಕಚೇರಿ 08276-200198, ಸೋಮವಾರಪೇಟೆ ತಾಲೂಕು ಕಚೇರಿ 08276-282045, ವಿರಾಜಪೇಟೆ ತಾಲೂಕು ಕಚೇರಿ 08274-257328 ಹಾಗೂ ಪೊನ್ನಂಪೇಟೆ ತಾಲೂಕು ಕಚೇರಿ 08274-249700 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಲ್ಲಿ ನೀಡಿರುವ ಸಹಾಯವಾಣಿ ಸಂಖ್ಯೆಗಳು ಕೇವಲ ಒಂದು ಜಿಲ್ಲೆಯ ತಾಲೂಕು ಉಪಚರಿಗಳ ಸಂಖ್ಯೆಯನ್ನು ನೀಡಲಾಗಿದೆ ನಿಮಗೂ ಕೂಡ ನಿಮ್ಮ ಹತ್ತಿರದ ತಾಲೂಕು ಕಚೇರಿಗಳ ಸಂಖ್ಯೆಯನ್ನು ಮೊಬೈಲ್ ನಲ್ಲಿ ಹುಡುಕಿಕೊಳ್ಳಬಹುದು ನಿಮ್ಮ ಗೂಗಲ್ ಓಪನ್ ಮಾಡಿಕೊಂಡು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ತಾಲೂಕು ಕಚೇರಿಯ ಸಹಾಯವಾಣಿ ಸಂಖ್ಯೆಯನ್ನು ಮೊಬೈಲ್ ನಲ್ಲಿ ಪಡೆದುಕೊಂಡು ಪರಿಹಾರ ಹಣ ಜಮೆ ಆಗಿರುವುದನ್ನು ತಕ್ಷಣವೇ ಚೆಕ್ ಮಾಡಿಕೊಳ್ಳಿ.

Comments (0)
Add Comment