ಬೇಸಿಗೆಗೆ ಎಳನೀರಿನ ಐಸ್ ಕ್ರೀಮ್ ಮಾಡಿ ನೋಡಿ

ಬೇಸಿಗೆಗೆ ಎಳನೀರು ಕುಡಿದಾಯಿತು. ಅದೂ ಇದೂ ಜ್ಯೂಸ್ ಕುಡಿದಾಯ್ತು. ಇದೀಗ ಐಸ್ ಕ್ರೀಮ್ ಸರದಿ. ತುಂಬಾ ಟೇಸ್ಟಿ ಆಗಿರುವ ಟೆಂಡರ್ ಕೊಕೊನಟ್ ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿಯಲೇ ಬೇಕು.

ಬೇಕಾಗುವ ಸಾಮಾಗ್ರಿಗಳು

ಫ್ರೆಶ್ ಕ್ರೀಮ್ – 1 ಕಪ್

ಕಂಡೆನ್ಸ್ಡ್ ಮಿಲ್ಕ್ –3/4 ಕಪ್

ತೆಂಗಿನ ಹಾಲು -3/4 ಕಪ್

ಎಳನೀರಿನ ಗಂಜಿ –3/4 ಕಪ್

ಮಾಡುವ ವಿಧಾನ

ಮೊದಲು ಮಿಕ್ಸಿಗೆ ಎಳನೀರಿನ ಗಂಜಿಯನ್ನು ಹಾಕಿ ರುಬ್ಬಿ ಕೊಳ್ಳಬೇಕು.

ಚಿಲ್ ಮಾಡಿರೋ ಸ್ಟೀಲ್ ಬೌಲ್ ಗೆ ಒಂದು ಕಪ್ ಕ್ರೀಮ್ ಹಾಕಿ ಸ್ಟಿಫ್ ಬರುವವರೆಗೂ ಚೆನ್ನಾಗಿ ಬೀಟ್ ಮಾಡಿಕೊಳ್ಳಬೇಕು.

ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಹಾಗೂ ತೆಂಗಿನ ಹಾಲು ಹಾಕಿ ಸ್ಪೂನ್ ನಲ್ಲಿ ಕಲಸಬೇಕು. ನಂತರ ರುಬ್ಬಿದ ಎಳನೀರಿನ ಗಂಜಿ ಹಾಕಿ ಹ್ಯಾಂಡ್ ಬೀಟರ್ ನ ಸಹಾಯದಿಂದ ಬೀಟ್ ಮಾಡಿಕೊಳ್ಳಬೇಕು.

ಬಳಿಕ ಕ್ಲೀನ್ ರಾಪ್ ಮಾಡಿ 2-3 ಗಂಟೆಗಳ ಕಾಲ ಫ್ರೀಜರ್ ನಲ್ಲಿ ಸೆಟ್ ಆಗಲು ಬಿಡಬೇಕು.

3 ಗಂಟೆ ಬಳಿಕ ಸ್ಪೂನ್ ನಿಂದ ಮಿಕ್ಸ್ ಮಾಡಿ ಮತ್ತೆ 7-8 ನಿಮಿಷಗಳ ಕಾಲ ಹ್ಯಾಂಡ್ ಬೀಟರ್ ನ ಸಹಾಯದಿಂದ ಬೀಟ್ ಮಾಡಿಕೊಳ್ಳಬೇಕು.

ನಂತರ ಇಡೀ ರಾತ್ರಿ ಫ್ರೀಜರ್ ನಲ್ಲಿ ಇಡಬೇಕು. ಮಾರನೇ ದಿನ ತಂಪು ತಂಪಾದ ಎಳನೀರಿನ ಐಸ್ ಕ್ರೀಂ ಸವಿಯಲು ಸಿದ್ಧ.

Comments (0)
Add Comment