‘ಭಗವಾಧ್ವಜ ಪ್ರಕರಣದ ಮೂಲಕ ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನು ಪ್ರದರ್ಶನ ಮಾಡಿದೆ’; ಬಿ ಕೆ ಹರಿಪ್ರಸಾದ್ ಆರೋಪ..!

ಮಂಗಳೂರು : ಮಂಡ್ಯದ ಕೆರಗೋಡು ನಲ್ಲಿ ಭಗವಾಧ್ವಜ ಪ್ರಕರಣದ ಮೂಲಕ ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನು ಪ್ರದರ್ಶನ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್ ಎಸ್ ಎಸ್ ನ ನಾಗ್ಪುರ ಕಛೇರಿಯಲ್ಲಿ 52 ವರ್ಷಗಳ‌ ಕಾಲ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. ಕೆರಗೋಡುನಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಅನುಮತಿ ಪಡೆದಿದ್ದರು ಆದ್ರೆ ಆದರೆ ಭಗವಾಧ್ವಜ ಹಾರಿಸಿ ಕೋಮು ಸೌಹಾರ್ದ ಕೆಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಶಾಂತಿ ಕಡೆಸುವ ಪ್ರಯತ್ನಗಳನ್ನು ಮಾಡಲು ಬಿಡಬಾರದು. ಸರ್ವ ಜನಾಂಗದ ಶಾಂತಿಯ ತೋಟ ಎಂದು ಪ್ರಣಾಳಿಕೆಯಲ್ಲಿ ಸರ್ಕಾರ ಹೇಳಿದೆ ಮತ್ತು ಸರ್ಕಾರ ಈ ಪ್ರಕರಣದಲ್ಲಿ ಭಾಗವಹಿಸಿದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಆರೋಪ ವಿಚಾರವಾಗಿ ಮಾತನಾಡಿದ ಅವರು ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಮಾಡಿಕೊಟ್ಟಿರೋದು ಅಲ್ಪಸಂಖ್ಯಾತರ ಓಲೈಕೆ ಆಗುತ್ತಾ? ಬಿಜೆಪಿ ಬಹುಸಂಖ್ಯಾತರ ಓಲೈಕೆಗೆ ಭಗವಾಧ್ವಜ ಹಾರಿಸಿದೆ ಮತ್ತು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದೆ ಎಂದರು.
ಶೆಟ್ಟರ್ ಪಕ್ಷ ಬಿಟ್ಟು ಹೋಗಿರೋದು ಕಾಂಗ್ರೆಸ್ ದೌರ್ಭಾಗ್ಯ..!
ಇನ್ನು ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಜಗದೀಶ್ ಶೆಟ್ಟರ್ ಸೌಮ್ಯ ಸ್ವಭಾವದ ವ್ಯಕ್ತಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕಾಗಿತ್ತು. ಅವರು ಪಕ್ಷ ಬಿಟ್ಟು ಹೋಗಿರೋದು ನಮ್ಮ ದೌರ್ಭಾಗ್ಯ ಆದ್ರೆ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸುತ್ತೇನೆ ಎಂದಿದ್ದಾರೆ.

Comments (0)
Add Comment