ಭಾರತಕ್ಕೆ ಮರಳಿದ ನೌಕಾಪಡೆಯ ಯೋಧರಿಗೆ ಶುಭ ಹಾರೈಸಿದ ಕಾಂಗ್ರೆಸ್

ನವದೆಹಲಿ: ಇಸ್ರೇಲ್‌ ಪರ ಬೇಹುಗಾರಿಕೆ ನಡೆಸಿದ ಆರೋಪದಡಿ ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾ ಪಡೆಯ 8 ಮಂದಿ ಮಾಜಿ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಸೋಮವಾರ ಬೆಳಗ್ಗೆ ಸ್ವದೇಶಕ್ಕೆ ಬಂದಿಳಿದಿದ್ದಾರೆ. ಇದೀಗ ಕತಾರ್‌ನಿಂದ ಭಾರತಕ್ಕೆ ಮರಳಿದ ನೌಕಾಪಡೆಯ ಯೋಧರಿಗೆ ಕಾಂಗ್ರೆಸ್ ಶುಭ ಹಾರೈಸಿದೆ.

ಈ ಬಗ್ಗೆ ಶುಭ ಹಾರೈಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಕತಾರ್‌ನ ನ್ಯಾಯಾಲಯದಿಂದ ಈ ಹಿಂದೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗಳು ಬಿಡುಗಡೆಗೊಂಡು ತಮ್ಮ ಮನೆಗೆ ಹಿಂತಿರುಗಿದ್ದಾರೆ. ಈ ಸಂತೋಷದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೂಡಾ ಇಡೀ ರಾಷ್ಟ್ರದೊಂದಿಗೆ ಸೇರಿ ಸಂತೋಷಪಡುತ್ತದೆ. ಅವರಿಗೆ ಮತ್ತು ಅವರ ಕುಟುಂಬಗಳಿಗೆ ಕಾಂಗ್ರೆಸ್ ಪರವಾಗಿ ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಸೋಮವಾರ ಮುಂಜಾನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಖಾಸಗಿ ಸಂಸ್ಥೆಯಾದ ಅಲ್ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುವ ಎಂಟು ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಗಳಲ್ಲಿ ಏಳು ಮಂದಿ ಕತಾರ್‌ನಿಂದ ಭಾರತಕ್ಕೆ ಮರಳಿದ್ದಾರೆ. ಭಾರತೀಯ ಪ್ರಜೆಗಳ ಬಿಡುಗಡೆಗೆ ಮನೆಗೆ ಬರುವುದನ್ನು ಸಕ್ರಿಯಗೊಳಿಸಿದ ಕತಾರ್‌ ರಾಜ್ಯದ ಅಮೀರ್‌ ಅವರ ನಿರ್ಧಾರವನ್ನು ನಾವು ಪ್ರಶಂಸಿಸುವುದಾಗಿ ಇದೇ ವೇಳೆ ಹೇಳಿಕೆಯಲ್ಲಿ ತಿಳಿಸಿತ್ತು.

Comments (0)
Add Comment