ಭಾರತದ ಅಗ್ರದಾನಿ ಉದ್ಯಮಿ ಶಿವ ನಡಾರ್ – 2,042 ಕೋಟಿ ರೂ. ದೇಣಿಗೆ

ನವದೆಹಲಿ: ಶಿವ ನಡಾರ್ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದು 2023ನೇ ಸಾಲಿನ ಫೋರ್ಬ್ಸ್ ಪಟ್ಟಿ ಪ್ರಕಾರ ನಡಾರ್ ಭಾರತದ ನಾಲ್ಕನೇ ಸಿರಿವಂತ ವ್ಯಕ್ತಿಯಾಗಿದ್ದಾರೆ.

ಆರ್ಥಿಕವಾಗಿ ಮಾತ್ರವಲ್ಲದೇ ತಾನು ಹೃದಯದಲೂ ಶ್ರೀಮಂತ ಎಂಬುವುದನ್ನು ಶಿವ ನಡಾರ್ ಈ ಹಿಂದಿನ ವರ್ಷಗಳಲ್ಲಿಯೇ ಸಾಬೀತುಪಡಿಸಿದ್ದರು. ಹುರುನ್ ಇಂಡಿಯಾ 2023 ರ ಹಣಕಾಸು ವರ್ಷದ ಲೋಕೋಪಕಾರಿ ಪಟ್ಟಿಯಲ್ಲಿ ಶಿವ ನಡಾರ್ ಕೊಡುಗೈ ದಾನಿಗಳಲ್ಲಿ ಅಗ್ರಸ್ಥಾನದಲ್ಲಿ ನಿಂತಿದ್ದಾರೆ.

ಹೆಚ್ ಸಿಎಲ್ ಟೆಕ್ ನ ಮುಖ್ಯಸ್ಥ ಶಿವ ನಾಡಾರ್ 2023ರ ಆರ್ಥಿಕ ವರ್ಷದಲ್ಲಿ ದಿನಕ್ಕೆ 5.6 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಸುಮಾರು 2,042 ಕೋಟಿ ರೂ. ಗಳನ್ನು ದಾನಮಾಡಿದ್ದಾರೆ.

ನಾಡಾರ್ ನಂತರ ವಿಪ್ರೋನ ಅಜೀಂ ಪ್ರೇಮ್‌ಜಿ ಮತ್ತು ಕುಟುಂಬವು 1,774 ಕೋಟಿ ರೂಪಾಯಿಗಳನ್ನು ಮತ್ತು ಮುಖೇಶ್ ಅಂಬಾನಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕುಟುಂಬವು 376 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ.

ನಂದನ್ ನೀಲೇಕಣಿ 189 ಕೋ.ರೂ. ಮಣಿಪಾಲ್ ಎಜ್ಯುಕೇಶನ್ ಹಲ್ತ್ ನ ರಂಜನ್ ಪೈಹಾಗೂ ಕುಟುಂಬವು 92 ಕೋ. ದೇಣಿಗೆ ನೀಡಿದ್ದು ಇನ್ನೂ ಹಲವರು ಕೋಟಿ ಕೋಟಿ ರೂ. ಗಳನ್ನು ದೇಣಿಗೆಯನ್ನು ನೀಡಿದ್ದಾರೆ.

Comments (0)
Add Comment