ಭಾರತೀಯರಿಗೆ ವೀಸಾ ಮುಕ್ತ ಥೈಲ್ಯಾಂಡ್ ಪ್ರವಾಸಕ್ಕೆ ಅವಕಾಶ

ಥೈಲ್ಯಾಂಡ್ :ಥೈಲ್ಯಾಂಡ್ ಸರ್ಕಾರಕ್ಕೆ ಪ್ರವಾಸೋದ್ಯಮ ಆದಾಯದ ಮೂಲವಾಗಿದ್ದರಿಂದ ಥೈಲ್ಯಾಂಡ್ ಸರ್ಕಾರ ಮುಂದಿನ ಆರು ತಿಂಗಳುಗಳ ಕಾಲ ಯಾವುದೇ ವೀಸಾ ಇಲ್ಲದೆಯೂ ಥೈಲ್ಯಾಂಡ್‌ಗೆ ಭೇಟಿ ನೀಡಬಹುದು ಎಂಬ ನಿರ್ಧಾರವನ್ನು ಕೈಗೊಂಡಿದೆ.

ಥಾಯ್​ ಸರ್ಕಾರವು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗುತ್ತಿದೆ. 2023ರ ನವೆಂಬರ್ 10 ರಿಂದ 2024ರ ಮೇ 10ರವರೆಗೆ ವೀಸಾ-ಮುಕ್ತವಾಗಿ ಥೈಲ್ಯಾಂಡ್‌ಗೆ ಭೇಟಿ ನೀಡಬಹುದಾಗಿದೆ ಎಂಬ ಮಾಹಿತಿ ಥಾಯ್​ ಸರ್ಕಾರ ನೀಡಿದೆ.ಅಲ್ಲದೇ 30 ದಿನಗಳವರೆಗೆ ಉಳಿದುಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಥೈಲ್ಯಾಂಡ್ ದೇಶಕ್ಕೆ ಭೇಟಿ ನೀಡುವವರ ಸಂಖ್ಯೆ ನೋಡಿದರೆ ಭಾರತವು ನಾಲ್ಕನೇ ದೇಶವಾಗಿದೆ. ಈ ವರ್ಷ ಸುಮಾರು 12 ಲಕ್ಷ ಪ್ರವಾಸಿಗರು ಥೈಲ್ಯಾಂಡ್​ಗೆ ಭೇಟಿ ನೀಡಿದ್ದಾರೆ.

ಭಾರತೀಯ ಸರ್ಕಾರ ನೀಡಿದ ಅಂಕಿ ಅಂಶದಂತೆ 2011 ರಲ್ಲಿ 1.4 ಕೋಟಿ, 2019 ರಲ್ಲಿ 2.7 ಕೋಟಿ ಪ್ರವಾಸಿಗರು ಥೈಲ್ಯಾಂಡ್​ ಪ್ರವಾಸ ಕೈಗೊಂಡಿದ್ದಾರೆ.

Comments (0)
Add Comment