‘ಭಾರತ- ಯುರೋಪಿಯನ್ ಒಕ್ಕೂಟ ನಡುವೆ ಮುಕ್ತ ವ್ಯಾಪಾರ ಒಪ್ಪಂದ’: ಸಚಿವ ಅಶ್ವಿನಿ ವೈಷ್ಣವ್

ದೆಹಲಿ: ಭಾರತ- ಯುರೋಪಿಯನ್ ಒಕ್ಕೂಟ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಆಗಿದ್ದು. ಸೆಮಿಕಂಡಕ್ಟರ್‌ಗಳ ಕುರಿತು ಭಾರತ ಮತ್ತು ಇಯು ನಡುವೆ ಪ್ರಮುಖ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದಕ್ಕೆ ಯುರೋಪಿಯನ್ ಆಂತರಿಕ ಮಾರುಕಟ್ಟೆಯ ಆಯುಕ್ತ ಥಿಯೆರಿ ಬ್ರೆಟನ್, ಭಾರತ ಸರ್ಕಾರದ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಸಹಿ ಹಾಕಿದ್ದಾರೆ.

ನವದೆಹಲಿಯಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಘೋಷಿಸಿದರು. IMEC ಭಾರತದಿಂದ ಯುರೋಪ್‌ಗೆ ಯೋಜಿತ ಹೊಸ ವ್ಯಾಪಾರ ಮಾರ್ಗವಾಗಿದೆ. ಇದು ಆರ್ಥಿಕ ಬೆಳವಣಿಗೆ ಮತ್ತು ದೇಶಗಳ ನಡುವೆ ಸಂಪರ್ಕವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದರ ಭಾಗವಾಗಿ ಇತ್ತೀಚೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಎಂಒಯುಗೆ ಸಹಿ ಹಾಕಿದ್ದಾರೆ. ಈ ವಿಷಯವನ್ನು ಕೇಂದ್ರ ಸಚಿವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಆರ್ಥಿಕ ಕಾರಿಡಾರ್ ಎಂಬುದು ರಸ್ತೆಗಳು, ಬಂದರುಗಳು, ರೈಲ್ವೆಗಳ ಸಮಗ್ರ ಜಾಲವಾಗಿದ್ದು, ಸರಕುಗಳು ಮತ್ತು ಜನರ ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿ ಚಲನೆಗೆ ಅನುಕೂಲವಾಗುವಂತೆ ಪ್ರಮುಖ ಉತ್ಪಾದನಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಇವು ಸಾಮಾನ್ಯವಾಗಿ ದೇಶಗಳ ನಡುವಿನ ವ್ಯಾಪಾರವನ್ನು ಉತ್ತೇಜಿಸಲು, ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

Comments (0)
Add Comment