ಭೀಕರ ಭೂಕಂಪನಕ್ಕೆ ನಲುಗಿದ ಅಫ್ಘಾನಿಸ್ತಾನ – 120ಕ್ಕೂ ಹೆಚ್ಚು ಜನ ಬಲಿ 1000ಕ್ಕೂ ಜನರಿಗೆ ಗಂಭೀರ ಗಾಯ ಧರೆಗುರುಳಿದ ಕಟ್ಟಡಗಳು

ಹೆರಾತ್: ಭೀಕರ ಭೂಕಂಪನಕ್ಕೆ ಅಫ್ಘಾನಿಸ್ತಾನ ನಲುಗಿ ಹೋಗಿದೆ. ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಸಂಭವಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನದಿಂದ ಕನಿಷ್ಠ 120 ಮಂದಿ ಬಲಿಯಾಗಿದ್ದು, ಇನ್ನೂ 1000ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭೂಕಂಪನದ ತೀವ್ರತೆಗೆ ಅನೇಕ ಕಟ್ಟಡಗಳು ಕುಸಿದಿದ್ದು, ಅವುಗಳ ಅವಶೇಷಗಳ ಅಡಿ ಅನೇಕ ಮಂದಿ ಸಿಲುಕಿಕೊಂಡಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಭಾಗದ ಅತಿ ದೊಡ್ಡ ನಗರವಾದ ಹೆರಾತ್‌ನ ವಾಯವ್ಯ ಭಾಗದ 40 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ಕೇಂದ್ರ ತಿಳಿಸಿದೆ. ರಿಕ್ಟರ್ ಮಾಪನದಲ್ಲಿ ಇದು 6.3 ತೀವ್ರತೆ ದಾಖಲಾಗಿದೆ. ಇದರ ಬಳಿಕ ಐದು ಮರು ಕಂಪನಗಳು ಸಂಭವಿಸಿವೆ. ಇವು 5.5, 4.7, 6.3, 5.9 ಮತ್ತು 4.6 ತೀವ್ರತೆ ಹೊಂದಿವೆ.

Comments (0)
Add Comment