ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ – ಸತ್ಯಾಂಶ ಬಾಯ್ಬಿಟ್ಟ ಆರೋಪಿ

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ. ವಿಚಾರಣೆ ವೇಳೆ ಆರೋಪಿ ಕಿರಣ್ ಹಣ ಹಾಗೂ ಚಿನ್ನಾಭರಣಕ್ಕಾಗಿ ಪ್ರತಿಮಾರನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.

ಆರೋಪಿ ಕಿರಣ್ ಪ್ರತಿಮಾ ಕೊಲೆಗೆ ಸಂಚು ರೂಪಿಸಿ ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿದ್ದು, ಬಳಿಕ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದನು. ಆರೋಪಿ 5 ಲಕ್ಷ ರೂ. ನಗದು, 3 ರಿಂದ 4 ಲಕ್ಷ ಮೌಲ್ಯದ 2 ಚಿನ್ನದ ಬಳೆ, ಬ್ರೇಸ್​​ ಲೇಟ್ ಅನ್ನು ಕಳವು ಮಾಡಿದ್ದನು.

ಆರೋಪಿ ಕಿರಣ್ ಕಳವು ಮಾಡಿದ ಹಣವನ್ನು ಕೋಣನಕುಂಟೆ ಬಳಿಯ ತನ್ನ ಗೆಳೆಯ ಶಿವು ಮನೆಯಲ್ಲಿ ಈ ಹಣವನ್ನು ನನಗೆ ಒರ್ವರು ಕೊಡಬೇಕಿತ್ತು. ಈಗ ಕೊಟ್ಟಿದ್ದಾರೆ. ಈ ಹಣ ನಿನ್ನ ಮನೆಯಲ್ಲಿ ಇರಲಿ, ನಾನು ಮಲೆ ಮಹದೇಶ್ವರ ಬೆಟ್ಟ ಹೋಗಿ ಬಂದ ಮೇಲೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿ ಇಟ್ಟಿದ್ದಾನೆ. ಆದರೆ ಶಿವುಗೆ ಇದು ಯಾವ ಹಣ ಎಂಬ ಅರಿವು ಇರಲಿಲ್ಲ.

ಆರೋಪಿಯು ಶಿವುಗೆ ಹಣ ತಂದು ಕೊಟ್ಟಿದ್ದು ಸ್ಪಷ್ಟವಾಗಿರುವುದರಿಂದ ಪೊಲೀಸರು ಶಿವು ಅನ್ನು ಸಾಕ್ಷಿಯಾಗಿ ಮಾಡಿದ್ದಾರೆ. ಇನ್ನು ಆರೋಪಿ ಕಳವುಗೈದಿದ್ದ ಐದು ಲಕ್ಷ ನಗದು ಮತ್ತು ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಹಣ, ಚಿನ್ನಾಭರಣ ಕಳವು ಮಾಡುವ ಉದ್ದೇಶದಿಂದ ಈ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

Comments (0)
Add Comment