ಮಂಗಳೂರು: ಅಪಾಯಕಾರಿ ಹೋರ್ಡಿಂಗ್, ಫ್ಲೆಕ್ಸ್ ತಕ್ಷಣ ತೆರವಿಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು, ಅಲ್ಲಲ್ಲಿ ವಿಕೋಪಗಳು ಸಂಭವಿಸುತ್ತಿದೆ. ಆದ್ದರಿಂದ ಅಪಾಯಕಾರಿ ಹೋರ್ಡಿಂಗ್, ಫ್ಲೆಕ್ಸ್ ಗಳನ್ನು ತಕ್ಷಣ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚನೆ ನೀಡಿದ್ದಾರೆ.

ಆದಿವಾಸಿಯ ಪಾದಪೂಜೆ ಮಾಡಿದ ಮಧ್ಯಪ್ರದೇಶ ಸಿಎಂ- ಪೋಟೊ ವೈರಲ್

ಮಂಗಳೂರಿನಲ್ಲಿ ನಿನ್ನೆ ಸುರಿದ ಗಾಳಿ ಮಳೆಗೆ ಬಿಕರ್ನಕಟ್ಟೆಗೆ ಹೋರ್ಡಿಂಗ್ ಬಿದ್ದು ಹಲವಾರು ದ್ವಿಚಕ್ರ ವಾಹನಗಳು ಜಖಂಗೊಂಡಿತ್ತು. ಅಲ್ಲದೆ ತಲಪಾಡಿಯ ಶಾರದಾ ವಿದ್ಯಾಲಯದ ಮೇಲ್ಛಾವಣಿ ಆರು ಅಂತಸ್ತಿನ ಮೇಲ್ಗಡೆಯಿಂದ ಕೆಳಗೆ ಹಾರಿಬಿದ್ದಿದೆ. ಆದರೆ ಯಾವು ಜೀವ ಹಾನಿ ಸಂಭವಿಸಿಲ್ಲ. ಇದೇ ರೀತಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಜಿಲ್ಲೆಯ ರಸ್ತೆ ಬದಿಗಳಲ್ಲಿ ಅಳವಡಿಸಿರುವ ಅಪಾಯಕಾರಿ ಫ್ಲೆಕ್ಸ್, ಹೋರ್ಡಿಂಗ್ ಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತೆರವು ಮಾಡಬೇಕೆಂದು ಮನಪಾ ಆಯುಕ್ತರು ಹಾಗೂ ‌ಜಿಲ್ಲಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Comments (0)
Add Comment