ಮಂಗಳೂರು -ಬೆಂಗಳೂರು ಹಳಿಯಲ್ಲಿ ‘ವಂದೇ ಭಾರತ್‌’ ರೈಲು ಅತೀ ಶೀಘ್ರದಲ್ಲಿ

ಮಂಗಳೂರು : ಬೆಂಗಳೂರು-ಮಂಗಳೂರು ಹಳಿಯಲ್ಲಿ ಅತೀ ಶೀಘ್ರದಲ್ಲಿ ನಹು ನಿರೀಕ್ಷಿತ ‘ವಂದೇ ಭಾರತ್‌’ ರೈಲು ಓಡಾಟ ಪ್ರಾರಂಭವಾಗಲಿದೆ. ಈ ಬಗ್ಗೆ ಸಂಸದ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಟ್ವೀಟ್ ಮಾಡಿ ಅಧಿಕೃತ ಘೋಷಣೆ ಮಾಡಿದ್ದಾರೆ.

ದೇಶದ ಅನೇಕ ಭಾಗಗಳಲ್ಲಿ ಓಡುವ ವಂದೇ ಭಾರತ್‌ ರೈಲು ಕರಾವಳಿ ಭಾಗಕ್ಕೆ ವಿಸ್ತರಿಬೇಕೆನ್ನುವುದು ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿದ್ದು ಇದಕ್ಕೆ ಕೇಂದ್ರ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ಕಟೀಲ್ ಟ್ವೀಟ್‌ X ನಲ್ಲಿ ಬರೆದುಕೊಂಡಿದದ್ದಾರೆ.
ಜೊತೆಗೆ ಮಂಗಳೂರು- ಗೋವಾ ಮಧ್ಯೆ ವಂದೇ ಭಾರತ್ ರೈಲು ಓಡಾಟಕ್ಕೆ ಸರ್ವ ಸನ್ನದ್ಧವಾಗಿದ್ದು, ಯಾವುದೇ ಕ್ಷಣದಲ್ಲಿ ಇದರ ವೇಳಾಪಟ್ಟಿ ಬಿಡುಗಡೆಯಾಗಲಿದೆ. ಇನ್ನು ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿ ಅದು ಕೂಡ ಈಡೇರಲಿದೆ. ಈ ಸಿಹಿಸುದ್ದಿಗಾಗಿ ಜಿಲ್ಲೆಯ ನಾಗರಿಕರ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು ಎಂದು ಟ್ವೀಟ್‌ X nಲ್ಲಿ ಕಟೀಲ್ ತಿಳಿಸಿದ್ದಾರೆ.
ಕಾಸರಗೋಡು-ತಿರುವನಂತಪುರಂ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರಿನ ತನಕ ವಿಸ್ತರಣೆ ಮಾಡಲು ಒತ್ತಾಯ ಕೇಳಿಬಂದಿತ್ತು. ಕೇರಳದ ಜನ ಮಂಗಳೂರಿಗೆ ವೈದ್ಯಕೀಯ, ಶಿಕ್ಷಣ ಹೀಗೇ ಅನೇಕ ಕಾರಣಗಳಿಗಾಗಿ ಮಂಗಳೂರನ್ನು ನೆಚ್ಚಿಕೊಂಡಿದ್ದು ಈ ರೈಲು ಮಂಗಳೂರು ವರೆಗೆ ವಿಸ್ತರಿಸಿದ್ದಲ್ಲಿ ಅಲ್ಲಿನ ಜನರಿಗೆ ಅನುಕೂಲವಾಗುತ್ತಿತ್ತು. ಆದ್ರೆ ಮಂಗಳೂರಿಗೆ ಇದರ ಪ್ರಯೋಜನ ಅತ್ಯಲ್ಪವಾಗಿದೆ ಈ ಕಾರಣಕ್ಕೆ ಕಾಸರಗೋಡು-ತಿರುವನಂತಪುರಂ ರೈಲು ಮಂಗಳೂರು ನಗರಕ್ಕೂ ವಿಸ್ತರಿಸುವುದಕ್ಕೆ ಇಲ್ಲಿನ ಜನಪ್ರತಿನಿಧಿಗಳು ಅಷ್ಟೊಂದು ಉತ್ಸಾಹ ತೋರಲಿಲ್ಲ ಎನ್ನಲಾಗಿದೆ, ಆದ್ರೆ ಕರಾವಳಿಗರು ಎಲ್ಲಾ ಕಾರ್ಯಗಳಿಗೂ ಬೆಂಗಳೂರನ್ನು ನೆಚ್ಚಿಕೊಂಡಿರುವುದರಿಂದ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸಬೇಕು ಎಂಬ ಕರಾವಳಿ ಭಾಗದ ಜನರು ಬೇಡಿಕೆ ಕೊನೆಗೂ ಈಡೇರುವ ವಿಶ್ವಾಸ ವ್ಯಕ್ತವಾಗಿದೆ.

Comments (0)
Add Comment