ಮಗನಿಂದಲೇ ಹತ್ಯೆಯಾದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ

ರಾಷ್ಟ್ರಪ್ರಶಸ್ತಿ ವಿಜೇತೆಯಾಗಿ ‘ಕಡೈಸಿ ವಿವಸಾಯಿ’ ಚಿತ್ರದಲ್ಲಿ ನಟಿಸಿದ್ದ ಕಾಸಮ್ಮಲ್ (71) ತಮ್ಮ ಮಗನಿಂದಲೇ ಹತ್ಯೆಯಾಗಿದ್ದಾರೆ.

ಪ್ರಕರಣ ಸಂಬಂಧ ಪುತ್ರ ಪಿ.ನಾಮಕೋಡಿ(52)ಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಮಧುರೈ ಮಧು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಮದ್ಯ ಖರೀದಿಸಲು ಹಣ ನೀಡುವುದಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು ಗಲಾಟೆ ತಾರಕಕ್ಕೇರಿ ಮಗ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ಕಾಸಮ್ಮಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಸಮ್ಮಲ್ &ಪತಿ ಬಾಲಸಾಮಿ ದಂಪತಿಗೆ ನಾಮಕೋಡಿ ಸೇರಿದಂತೆ ಮೂವರು ಮಕ್ಕಳಿದ್ದಾರೆ.

Comments (0)
Add Comment