ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ – ನ.13 ರವರೆಗೆ ಇಂಟರ್ನೆಟ್ ಸ್ಥಗಿತ

ಇಂಫಾಲ: ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಅಲ್ಲಿನ ಸರ್ಕಾರವು ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ನಿಷೇಧವನ್ನು ನವೆಂಬರ್ 13 ರವರೆಗೆ ವಿಸ್ತರಿಸುವುದಾಗಿ ಘೋಷಿಸಿದೆ.

ಈ ಕುರಿತು ಮಣಿಪುರದ ಪೊಲೀಸ್ ಮಹಾನಿರ್ದೇಶಕ ಮಾಹಿತಿ ನೀಡಿದ್ದು, ಬಿಷ್ಣುಪುರ, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳಲ್ಲಿ ಎರಡು ಸಮುದಾಯಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದಿದ್ದಾರೆ.

ಇನ್ನು ಈ ನಡುವೆ ಶಸ್ತ್ರಾಸ್ತಧಾರಿಗಳ ಗುಂಪೊಂದು ಒಂದು ಸಮುದಾಯಕ್ಕೆ ಸೇರಿದ ಇಬ್ಬರನ್ನು ಅಪಹರಣ ಮಾಡಿದೆ ಎಂದು ಹೇಳಿ ಪ್ರತಿಭಟನೆಯನ್ನು ನಡೆಸಿ ಹಿಂಸಾಚಾರಕ್ಕೆ ಮುಂದಾಗಿದೆ.

ಮಣಿಪುರದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಚಿತ್ರಗಳು, ದ್ವೇಷ ಭಾಷಣ ಮತ್ತು ದ್ವೇಷದ ವೀಡಿಯೊ ಸಂದೇಶಗಳನ್ನು ಪ್ರಸಾರ ಮಾಡಲು ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಿಕೊಳ್ಳುವ ಆತಂಕವಿರುವ ಹಿನ್ನೆಲೆಯಲ್ಲಿ ಹಿಂಸಾಚಾರಕ್ಕೆ ಒಳಗಾಗದ ಜಿಲ್ಲೆಗಳಲ್ಲಿ ಮಣಿಪುರ ಸರ್ಕಾರ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿ ಆದೇಶ ಹೊರಡಿಸಿದೆ.

Comments (0)
Add Comment