ಮತ್ತೆ ಮತ್ತೆ ಟೀ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ! ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

ತಲೆ ಬಿಸಿಯಾದರೆ ಒಂದು ಕಪ್ ಟೀ ಕುಡಿಯಬೇಕು ಅನ್ನಿಸುತ್ತದೆ, ಅದೇನೋ ಸರಿ.. ಆದರೆ ಟೀಯನ್ನು (Tea) ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ. ಹಾಗೆ ಕುಡಿದರೆ ಏನಾಗುತ್ತೆ ಗೊತ್ತಾ? ಬೆಳಗ್ಗೆ ಎದ್ದಾಗ ಒಂದು ಕಪ್ ಟೀ ಕುಡಿಯುವುದು ಅನೇಕರ ಇಷ್ಟ. ಅದು ಗ್ರೀನ್ ಟೀ (Green Tea) ಅಥವಾ ಲೆಮನ್ ಟೀ ಆಗಿರಲಿ, ಕೆಲವು ರೀತಿಯ ಚಹಾ ಗಂಟಲಿಗೆ ಇಳಿಯಬೇಕು ಅಷ್ಟೇ. ಚಹಾದಲ್ಲಿ ಇರುವಂತೆ ಹಲವು ವಿಧಗಳಿವೆ. ನೂರಾರು ವಿಧದ ಚಹಾಗಳಿವೆ.. ಯಾವುದೇ ಒಂದು ಒತ್ತಡದ ಕೆಲಸ ಮಾಡುತ್ತಿದ್ದರೆ ಒಂದು ಕಪ್ ಚಹಾವನ್ನು ಕುಡಿಯಬೇಕು ಅನ್ನಿಸುತ್ತದೆ. ಕೆಲಸ ಮಾಡಿ ಸುಸ್ತಾದರೂ ಒಂದು ಕಪ್ ಟೀ ಕುಡಿಯಬೇಕು ಅನ್ನಿಸದೆ ಇರದು.

ಇದಲ್ಲದೆ, ಸ್ನೇಹಿತರು ವಿಶ್ರಾಂತಿಗಾಗಿ ಸ್ವಲ್ಪ ಚಹಾ ಕುಡಿಯೋಣ ಎಂದು ಹೇಳುತ್ತಾರೆ. ಹೀಗಾಗಿ ಚಹಾ ದಿನದ ಅಂಗವಾಗಿಬಿಟ್ಟಿದೆ. ಟೀ ಸ್ಟಾಲ್ ಬಳಿ ಕುಳಿತುಕೊಂಡರೆ ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ನಡೆಯುವ ಎಲ್ಲ ಸಂಗತಿಗಳು ತಿಳಿಯುತ್ತವೆ. ಅಂತಹ ಚಹಾವನ್ನು ಕುಡಿಯಬೇಕಾದರೆ ಅದನ್ನು ಹೊಸದಾಗಿ ಮಾಡಿ ಕುದಿಸಿ ಕುಡಿಯುವುದು ಉತ್ತಮ. ಇದಲ್ಲದೆ, ತಾಜಾ ಚಹಾದ ರುಚಿ ವಿಭಿನ್ನವಾಗಿರುತ್ತದೆ. ಅನೇಕ ಜನರು ಚಹಾವನ್ನು ಒಟ್ಟಿಗೆ ಒಮ್ಮೆಲೇ ಮಾಡಿತ್ತು ಅದನ್ನು ಫ್ಲಾಸ್ಕ್ನಲ್ಲಿ ಸುರಿಯುತ್ತಾರೆ ಮತ್ತು ನಿಧಾನವಾಗಿ ದಿನವೆಲ್ಲಾ ಕುಡಿಯುತ್ತಾರೆ. ಕೆಲವರು ಚಹಾವನ್ನು ಕುದಿಸಿ ಅದನ್ನು ಇಟ್ಟುಕೊಳ್ಳುತ್ತಾರೆ ಮತ್ತು ಅದನ್ನು ಕುಡಿಯಲು ಬಯಸಿದಾಗ ಬಿಸಿಮಾಡುತ್ತಾರೆ. ಆದರೆ ಚಹಾವನ್ನು ಮತ್ತೆಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ. ನಾಲ್ಕು ಗಂಟೆಗೂ ಹೆಚ್ಚು ಕಾಲ ಇಟ್ಟುಕೊಂಡ ನಂತರ ಟೀಯನ್ನು ಮತ್ತೆ ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ತಜ್ಞರು.

ಬ್ಯುಟಿಫುಲ್ ತ್ವಚೆಗೆ ಹೊಳಪನ್ನು ನೀಡಲು ದಾಸವಾಳದ ಹೂವು ವರದಾನ! ಈ ರೀತಿ ಬಳಸಿ ಕುದಿಸಿದ ಚಹಾದಲ್ಲಿ ಶಿಲೀಂಧ್ರವು ರೂಪುಗೊಳ್ಳುತ್ತದೆ. ಅದರಲ್ಲಿ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಬೆಳೆಯುತ್ತವೆ, ಆದ್ದರಿಂದ ನೀವು ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿಯುತ್ತಿದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗುತ್ತೀರಿ. ಹಾಲಿನೊಂದಿಗೆ ತಯಾರಿಸಿದ ಚಹಾವನ್ನು 41 ರಿಂದ 140 ಡಿಗ್ರಿ ಫ್ಯಾರನ್‌ಹೀಟ್‌ಗಳ ನಡುವೆ ಬಿಸಿಮಾಡಲಾಗುತ್ತದೆ. ಇದು ಬ್ಯಾಕ್ಟೀರಿಯಾವನ್ನು ಸೃಷ್ಟಿಸುವುದು ಮಾತ್ರವಲ್ಲದೆ ರುಚಿಯನ್ನು ಬದಲಾಯಿಸುತ್ತದೆ. ಬಿಸಿ ಮಾಡಿದ ನಂತರ ಟೀ ಕುಡಿಯುವುದು ಒಳ್ಳೆಯದಲ್ಲ. ಅಂತೆಯೇ ಹರ್ಬಲ್ ಟೀ ಅನ್ನು ಎರಡನೇ ಬಾರಿ ಬಿಸಿ ಮಾಡಿ ಕುಡಿಯಬಾರದು. ಹಾಗೆ ಬಿಸಿ ಮಾಡಿದರೆ ಅದರಲ್ಲಿರುವ ಪೋಷಕಾಂಶಗಳು ಮತ್ತು ಖನಿಜಗಳು ನಾಶವಾಗುತ್ತವೆ. ಇಂತಹ ಟೀ ಕುಡಿದರೆ ಹೊಟ್ಟೆನೋವು ಬರುವ ಸಾಧ್ಯತೆಗಳಿವೆ. ಇದಲ್ಲದೆ, ಅತಿಸಾರಕ್ಕೆ ಕಾರಣವಾಗಬಹುದು. ಹೊಟ್ಟೆ ಉಬ್ಬುವುದು ಮತ್ತು ವಾಕರಿಕೆ ಮುಂತಾದ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ. ಮೇಲಾಗಿ ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿದರೆ ಅದರ ಪರಿಣಾಮದಿಂದ ಆರೋಗ್ಯ ಕುಂಠಿತವಾಗುತ್ತದೆ, ನಿಮಗೆ ಗೊತ್ತಿಲ್ಲದೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ಸೋ.. ಟೀ ಕುಡಿಯಬೇಕೆಂದಿದ್ದರೆ ಫ್ರೆಶ್ ಆಗಿ ಮಾಡಿ ಕುಡಿದರೆ ಉತ್ತಮ. ಇದರಿಂದ ಯಾವುದೇ ಕೆಟ್ಟ ಪರಿಣಾಮಗಳಿರುವುದಿಲ್ಲ.

Comments (0)
Add Comment