ಮತ್ತೆ ವಿದೇಶಕ್ಕೆ ಹಾರಿದ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಇತ್ತೀಚೆಗಷ್ಟೇ ಕುಟುಂಬ ಸಮೇತರಾಗಿ ವಿದೇಶಿ ಪ್ರವಾಸಕ್ಕೆ ತೆರಳಿದ್ದ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ, ಈಗ ಮತ್ತೆ ವಿದೇಶಕ್ಕೆ ಹಾರಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪತ್ನಿ ಅನಿತಾ ಜೊತೆಗೆ ದುಬೈನ ವಿಮಾನ ಹತ್ತಿದ್ದಾರೆ. ಮುಂದಿನ 5 ದಿನಗಳ ಕಾಲ ದುಬೈ ಪ್ರವಾಸದಲಿ ಇರಲಿದ್ದಾರೆ ಎಂದು ಕುಮಾರಸ್ವಾಮಿ ಆಪ್ತರು ತಿಳಿಸಿದ್ದಾರೆ. ಇನ್ನೂ ಬಿಜೆಪಿ ಜೊತೆಗಿನ ಮೈತ್ರಿ ಘೋಷನೆಗೂ ಮುನ್ನ ಹೆಚ್ ಡಿಕೆ ಅವರು ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದರು.

ಅದಕ್ಕೂ ಹಿಂದೆ ಯುರೋಪ್ , ಸಿಂಗಾಪುರ, ಮಲೇಶಿಯಾದ ಕೌಲಾಲಂಪುರದ ಪ್ರವಾಸ ಮಾಡಿದ್ದರು.

 

Comments (0)
Add Comment