ಮತ್ಸ್ಯ ಸಂಪದ ಯೋಜನೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

 

ಚಿತ್ರದುರ್ಗ: ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2023-24ನೇ ಸಾಲಿಗೆ ವಿವಿಧ ಘಟಕಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 15 ರವರಗೆ ವಿಸ್ತರಿಸಲಾಗಿದೆ.

ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 2023-24ನೇ ಸಾಲಿಗೆ ವಿವಿಧ ಘಟಕಗಳಡಿ ಚಿತ್ರದುರ್ಗ ಜಿಲ್ಲೆಗೆ ಗುರಿಗಳನ್ನು ನೀಡಲಾಗಿದ್ದು, ಸಾಮಾನ್ಯ ವರ್ಗಕ್ಕೆ ಶೇ.40, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಶೇ.60 ಸಹಾಯಧನ ನೀಡಲಾಗುವುದು.

ಆಸಕ್ತ ಫಲಾನುಭವಿಗಳು ತಮಗೆ ಸಂಬಂಧಿಸಿದ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಇದೇ ಸೆಪ್ಟೆಂಬರ್ 15ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಯೋಜನೆ ವಿವರ : ಮೀನು ಕೃಷಿಕೊಳ ನಿರ್ಮಾಣಕ್ಕೆ ಸಹಾಯ 20 ಹೆ. ಭೌತಿಕ ಗುರಿ ನಿಗಧಿಪಡಿಸಲಾಗಿದ್ದು,  10 ಸಮಾನ್ಯ, 6 ಮಹಿಳೆ ವರ್ಗ, 3 ಪರಿಶಿಷ್ಟ ಜಾತಿಗೆ ಹಾಗೂ 1 ಪರಿಶಿಷ್ಟ ಪಂಗಡಕ್ಕೆ  ಮೀಸಲಿದೆ.  ಮೀನು ಕೃಷಿಕೊಳದ ಹೂಡಿಕೆ ವೆಚ್ಚಕ್ಕೆ ಸಹಾಯ  20 ಹೆ. ಭೌತಿಕ ಗುರಿ ನಿಗಧಿಪಡಿಸಲಾಗಿದ್ದು, 10 ಸಮಾನ್ಯ, 6 ಮಹಿಳೆಗೆ, 3 ಪರಿಶಿಷ್ಟ ಜಾತಿಗೆ, 1 ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ. ಬಯೋಫ್ಲಾಕ್ ಕೊಳ ಘಟಕ ನಿರ್ಮಾಣ ಹೂಡಿಕೆ ವೆಚ್ಚ ಸೇರಿ 1 ಭೌತಿಕ ಗುರಿ ನಿಗಧಿಪಡಿಸಲಾಗಿದ್ದು, 1 ಮಹಿಳೆಗೆ ಮೀಸಲಿದೆ. ಎಫ್‍ಆರ್‍ಪಿ ದೋಣಿ ಮತ್ತು ಬಲೆ ಖರೀದಿಗೆ ಸಹಾಯ 1 ಭೌತಿಕ ಗುರಿ, 1 ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ ಹಾಗೂ ಸಂಬಂಧಿಸಿದ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ದೂರವಾಣಿ ಸಂಖ್ಯೆ ಚಿತ್ರದುರ್ಗ 7353442282, ಹಿರಿಯೂರು 9972010433, ಹೊಸದುರ್ಗ ಮತ್ತು ಹೊಳಲ್ಕೆರೆ 7022933310, ಚಳ್ಳಕೆರೆ ಮತ್ತು ಮೊಳಕಾಲ್ಮುರು 9342187356 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ಸ್ಯ ಸಂಪದ ಯೋಜನೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Comments (0)
Add Comment