ಮದುವೆಯಲ್ಲಿ ಸೌಂಡ್ ಸಿಸ್ಟಂ ವಿದ್ಯುತ್ ತಂತಿ ಸ್ಪರ್ಶಿಸಿ 3 ಮಂದಿ ಸಾವು

ಲಕ್ನೋ: ಮದುವೆಯಲ್ಲಿ ಸೌಂಡ್ ಸಿಸ್ಟಂ ವಿದ್ಯುತ್ ತಂತಿ ಸ್ಪರ್ಶಿಸಿ 3 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಮದುವೆಯೊಂದರಲ್ಲಿ ನಡೆದಿದೆ. ಸ್ಪೀಕರ್ ಪಕ್ಕದಲ್ಲಿದ್ದ ಕಾರ್ಮಿಕ ಸತೀಶ್ (18) ಮತ್ತು ಇಬ್ಬರು ಸಹೋದರರಾದ ರವಿ (20) ಮತ್ತು ರಾಜೇಶ್ (18) ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಸೌಂಡ್ ಸಿಸ್ಟಂ ಮೇಲಿರುವ ಹೈ ಟೆನ್ಷನ್ ವೈರ್ ಸ್ಪರ್ಶದಿಂದ ಇಬ್ಬರು ಸಹೋದರರು ಮತ್ತು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಟ್ರಾಲಿಯೊಂದರಲ್ಲಿ ಹಾಕಲಾಗಿದ್ದ ಸೌಂಡ್ ಸಿಸ್ಟಂ ಅನ್ನು ಎಳೆಯುತ್ತಿದ್ದಾಗ ಆಕಸ್ಮಿಕವಾಗಿ ಹೈ ಟೆನ್ಷನ್ ಲೈನ್‌ಗೆ ತಗುಲಿತ್ತು. ಮೃತ ಸಹೋದರರು 18 ಮತ್ತು 20 ವರ್ಷ ವಯಸ್ಸಿನವರಾಗಿದ್ದರೆ, ಕಾರ್ಮಿಕ 18 ವರ್ಷ ವಯಸ್ಸಿನವರಾಗಿದ್ದರು.

Comments (0)
Add Comment