ಮನೆಯಲ್ಲೇ ತಯಾರಿಸಿ ಇನ್ ಸ್ಟಂಟ್ ‘ಜಿಲೇಬಿ’

ಭಾರತದ ಜನಪ್ರಿಯ ಸಿಹಿ ತಿನಿಸುಗಳಲ್ಲಿ ಜಿಲೇಬಿ ಕೂಡ ಒಂದು. ಜಿಲೇಬಿ ಹುಟ್ಟಿದ್ದು ಉತ್ತರಭಾರತದಲ್ಲಿ ಆದ್ರೆ, ದೇಶಾದ್ಯಂತ ಜನರು ಇದನ್ನು ಇಷ್ಟಪಡ್ತಾರೆ. ಜಿಲೇಬಿ ತಿನ್ನಲು ನೀವು ಬೇಕರಿಗೋ ಅಥವಾ ಹೋಟೆಲ್ ಗೋ ಹೋಗಬೇಕಿಲ್ಲ. ಮನೆಯಲ್ಲೇ ಆರಾಮಾಗಿ ನೀವೇ ಇನ್ ಸ್ಟಂಟ್ ಜಿಲೇಬಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿ : ಅರ್ಧ ಕಪ್ ಮೈದಾ ಹಿಟ್ಟು, ಒಂದು ಚಮಚ ಕಾರ್ನ್ ಫ್ಲೋರ್, ಕಾಲು ಚಮಚ ಬೇಕಿಂಗ್ ಸೋಡಾ, ಅರ್ಧ ಚಮಚ ವಿನಿಗರ್, ಒಂದು ಚಮಚ ಮೊಸರು, 5 ಚಮಚ ನೀರು, ಚಿಟಿಕೆ ಅರಿಶಿನ, ಒಂದು ಕಪ್ ಸಕ್ಕರೆ, ಕಾಲು ಚಮಚ ಕೇಸರಿ, ಒಂದು ಚಮಚ ತುಪ್ಪ, ಕರಿಯಲು ಎಣ್ಣೆ.

ಮಾಡುವ ವಿಧಾನ : ಮೊದಲು ಸಕ್ಕರೆ ಪಾಕ ತಯಾರಿಸಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಒಂದು ಕಪ್ ಸಕ್ಕರೆ, ಕಾಲು ಕಪ್ ನೀರು ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಿ. ಬಳಿಕ ಗ್ಯಾಸ್ ಆಫ್ ಮಾಡಿ ಅದಕ್ಕೆ ಅರ್ಧ ಚಮಚ ನಿಂಬೆ ರಸ ಬೆರೆಸಿ.

ಜಿಲೇಬಿ ಹಿಟ್ಟು ತಯಾರಿಸಲು ಒಂದು ಬೌಲ್ ನಲ್ಲಿ ಅರ್ಧ ಕಪ್ ಮೈದಾಹಿಟ್ಟು, ಒಂದು ಚಮಚ ಕಾರ್ನ್ ಫ್ಲೋರ್, ಒಂದು ಚಮಚ ಮೊಸರು ಹಾಕಿ ಚಮಚದ ಸಹಾಯದಿಂದ ಮಿಕ್ಸ್ ಮಾಡಿ. ಅದಕ್ಕೆ ಅರ್ಧ ಚಮಚ ವಿನಿಗರ್ ಹಾಗೂ 5-6 ಚಮಚ ನೀರು ಬೆರೆಸಿ. ಸುಮಾರು 4 ನಿಮಿಷಗಳವರೆಗೆ ವೃತ್ತಾಕಾರವಾಗಿ ತಿರುಗಿಸುತ್ತ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕಾಲು ಚಮಚ ಬೇಕಿಂಗ್ ಸೋಡಾ ಬೆರೆಸಿ ಇನ್ನೊಮ್ಮೆ ನಿಧಾನವಾಗಿ ಮಿಕ್ಸ್ ಮಾಡಿ. ರೆಡಿಯಾದ ಹಿಟ್ಟನ್ನು ನಿಧಾನವಾಗಿ ಖಾಲಿಯಾದ ಟೊಮೆಟೋ ಕೆಚಪ್ ಬಾಟಲಿಯಲ್ಲಿ ತುಂಬಿಸಿ.

ನಂತರ ಬಾಣೆಲೆಯಲ್ಲಿ ಕರಿಯಲು ಎಣ್ಣೆ ಹಾಕಿ ಅದಕ್ಕೆ ಒಂದು ಚಮಚ ತುಪ್ಪ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಕೆಚಪ್ ಬಾಟಲಿಯಲ್ಲಿ ಹಾಕಿದ್ದ ಹಿಟ್ಟನ್ನು ಜಿಲೇಬಿ ಆಕಾರದಲ್ಲಿ ಎಣ್ಣೆಯಲ್ಲಿ ಬಿಡಿ. ಒಂದು ಬದಿಯಲ್ಲಿ ಬೆಂದ ಬಳಿಕ ಜಿಲೇಬಿಯನ್ನು ಮಗುಚಿ ಹಾಕಿ. ಜಿಲೇಬಿಗೆ ತೆಳುವಾದ ಕಂದು ಬಣ್ಣ ಬರುವವರೆಗೆ ಕರಿಯಿರಿ. ಎಣ್ಣೆಯಿಂದ ತೆಗೆದು ಕೂಡಲೇ ತಯಾರಿಸಿಟ್ಟಿದ್ದ ಬಿಸಿ ಸಕ್ಕರೆ ಪಾಕದಲ್ಲಿ ಹಾಕಿ. ಸಕ್ಕರೆ ಪಾಕದಲ್ಲಿ ಜಿಲೇಬಿಯ ಎರಡೂ ಕಡೆ ಮುಳುಗಿಸಿ. ಗರಮಾ ಗರಂ ಜಿಲೇಬಿಯನ್ನು ಸರ್ವ್ ಮಾಡಿ.

Comments (0)
Add Comment